ಸುಳ್ಳು ಜನನ ಪ್ರಮಾಣ ಪತ್ರದ ಬಗ್ಗೆ ಕಠಿಣ ಕ್ರಮ: ಬಿಸಿಸಿಐ

ಸುಳ್ಳು ಜನನ ಪ್ರಮಾಣ ಪತ್ರದ ಬಗ್ಗೆ ಕಠಿಣ ಕ್ರಮ: ಬಿಸಿಸಿಐ

HSA   ¦    Aug 03, 2020 02:17:31 PM (IST)
ಸುಳ್ಳು ಜನನ ಪ್ರಮಾಣ ಪತ್ರದ ಬಗ್ಗೆ ಕಠಿಣ ಕ್ರಮ: ಬಿಸಿಸಿಐ

ನವದೆಹಲಿ: ಸುಳ್ಳು ಜನನ ಪ್ರಮಾಣ ಪತ್ರ ನೀಡಿ ಮೋಸ ಮಾಡುವಂತಹ ಆಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದ್ದು, ಹೊಸ ಕ್ರಮಗಳನ್ನು ಜಾರಿ ತರಲು ನಿರ್ಧರಿಸಿದೆ.

2020-21ರಲ್ಲಿ ಬಿಸಿಸಿಐಯ ಎಲ್ಲಾ ವಯೋಮಾನದ ಟೂರ್ನಿಗಳಲ್ಲಿ ಭಾಗವಹಿಸಲಿರುವ ಆಟಗಾರರಿಗೆ ಈ ಕ್ರಮವು ಅನ್ವಯಿಸಲಿದೆ.

ಎಲ್ಲಾ ವಯೋಮಾನದ ಟೂರ್ನಿಗಳಲ್ಲಿ ಸರಿಯಾದ ವಯಸ್ಸಿನ ಆಟಗಾರರು ಭಾಗವಹಿಸಬೇಕು ಎನ್ನುವುದು ಬಿಸಿಸಿಐಯು ಸರಿಯಾಗಿ ನಿರ್ಧಾರ ಮಾಡಬೇಕು. ಇದಕ್ಕಾಗಿ ಬಿಸಿಸಿಐ ಹೊಸ ಕ್ರಮ ಜಾರಿ ಮಾಡಿದೆ.