ಕಾಸರಗೋಡಿನಲ್ಲಿ ಭಾರಿ ಮಳೆ: ತಗ್ಗುಪ್ರದೇಶ ಜಲಾವೃತ

ಕಾಸರಗೋಡಿನಲ್ಲಿ ಭಾರಿ ಮಳೆ: ತಗ್ಗುಪ್ರದೇಶ ಜಲಾವೃತ

SK   ¦    Aug 08, 2020 03:31:00 PM (IST)
ಕಾಸರಗೋಡಿನಲ್ಲಿ ಭಾರಿ ಮಳೆ: ತಗ್ಗುಪ್ರದೇಶ ಜಲಾವೃತ

ಕಾಸರಗೋಡು : ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ  ಧಾರಾಕಾರ ಮಳೆ ಸುರಿಯುತ್ತಿದ್ದು , ತಗ್ಗುಪ್ರದೇಶ ಜಲಾವೃತಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದೆ . ಕೆಲ ದಿನಗಳ ಬಳಿಕ ಮಳೆ ತೀವ್ರಗೊಡಿದ್ದು , ಜಿಲ್ಲೆಯ ಎಲ್ಲಾ ನದಿ ಗಳು ಉಕ್ಕಿ ಹರಿದ ಪರಿಣಾಮ ಪ್ರವಾಹ ಸ್ಥಿತಿ ಉಂಟಾಗಿದೆ .

ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ. ತೇಜಸ್ವಿನಿ ನದಿ  ಉಕ್ಕಿ ಹರಿಯುತ್ತಿರು ವುದರಿಂದ      ನೀಲೇಶ್ವರ ನಗರಸಭೆಯ   ಕಾರ್ಯಂಗೊಡು , ನಿಲಾಯಿ,  ಪಾಲಯಿ  ಹಾಗೂ  ಇನ್ನಿತರ ಸ್ಥಳಗಳಿಗೆ ನೀರು ನುಗ್ಗಿದೆ .  15 ರಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.  

ಭೀಮನಡಿ  ಕೊನ್ನಕ್ಕೊಡ್  ನಲ್ಲಿ ಭೂಕುಸಿತ ಉಂಟಾಗಿದೆ  ಮುತ್ತಾಡಿ ಕಾಲನಿಯ ಆರು ಮನೆಗಳನ್ನು ಸ್ಥಳಾ0ತರಿಸಲಾಗಿದೆ . ಚೈತ್ರ ವಾಹಿನಿ  ಹೊಳೆ ಉಕ್ಕಿ ಹರಿಯುತ್ತಿದೆ .  ಬಾಯಾರು ಮುಳಿಗದ್ದೆಯಲ್ಲಿ  ಮಣ್ಣು ಕುಸಿದಿದ್ದು, 15 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ  ಇಂದು ಮುಂಜಾನೆ ಘಟನೆ ನಡೆದಿದೆ . ಶಬ್ದ ಕೇಳಿ ಮನೆಯವರು  ಹೊರಗೆ ಓಡಿದರಿಂದ  ಅಪಾಯ ತಪ್ಪಿದೆ . ಉಪ್ಪಳ, ಕುಂಬಳೆ , ಕಾಸರಗೋಡು ತೀರದಲ್ಲಿ ಕಡಲ್ಕೊರೆತದ ಅಬ್ಬರ ತೀವ್ರಗೊಂಡಿದ್ದು  , 25 ಕ್ಕೂ   ಅಧಿಕ ಮನೆಗಳು ಅಪಾಯದಲ್ಲಿದೆ .  ಉಪ್ಪಳ ಮುಸೋಡಿಯಲ್ಲಿ ಕಾಂಕ್ರೀ ಟ್ ರಸ್ತೆ ಕೊಚ್ಚಿ ಹೋಗಿದೆ . ಹಲವು ಮನೆಗಳು ಅಪಾಯದಲ್ಲಿದೆ. ಪುತ್ತಿಗೆ  ಅಂಗಡಿಮೊಗರು ಹೊಳೆಯು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ