ಅಶ್ವಿನ್ ಶತಕ ಸಂಭ್ರಮಿಸಿದ ಮೊಹಮ್ಮದ್ ಸಿರಾಜ್

ಅಶ್ವಿನ್ ಶತಕ ಸಂಭ್ರಮಿಸಿದ ಮೊಹಮ್ಮದ್ ಸಿರಾಜ್

HSA   ¦    Feb 16, 2021 09:19:36 AM (IST)
ಅಶ್ವಿನ್ ಶತಕ ಸಂಭ್ರಮಿಸಿದ ಮೊಹಮ್ಮದ್ ಸಿರಾಜ್

ಚೆನ್ನೈ: ತಮ್ಮ ಬ್ಯಾಟಿಂಗ್ ನಿಂದ ಅರ್ಧ ಶತಕ ಅಥವಾ ಶತಕ ಬಾರಿಸಿದರೆ ಆಗ ಸಂಭ್ರಮಿಸುವುದು ಇದ್ದೇ ಇದೆ. ಆದರೆ ಸಹ ಆಟಗಾರನೊಬ್ಬ ಶತಕ ಬಾರಿಸುವ ವೇಳೆ ಇನ್ನೊಬ್ಬ ಸಂಭ್ರಮಿಸುವುದು ತುಂಬಾ ಕಡಿಮೆ. ಆದರೆ ಈ ಅಪರೂಪದ ಘಟನೆಗೆ ಟೀಂ ಇಂಡಿಯಾದ ಆಟಗಾರ ಮೊಹಮ್ಮದ್ ಸಿರಾಜ್ ಸಾಕ್ಷಿಯಾದರು.

ಚೆನ್ನೈಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ರವಿಚಂದ್ರನ್ ಅಶ್ವಿನ್ ಶತಕ ಬಾರಿಸಿದ ವೇಳೆ ಸಿರಾಜ್ ಕೂಡ ಸಂಭ್ರಮಿಸಿದರು. ಅಶ್ವಿನ್ ಗೆ ಉತ್ತಮ ಜತೆ ನೀಡಿದ ಕೊನೇ ಬ್ಯಾಟ್ಸ್ ಮೆನ್ ಸಿರಾಜ್ 16 ರನ್ ಮಾಡಿ ನಾಟೌಟ್ ಆಗಿ ಉಳಿದರು.

ಅಶ್ವಿನ್ ಶತಕ ಬಾರಿಸಿರುವುದು ಮಾತ್ರವಲ್ಲದೆ, ಇದೇ ಪಂದ್ಯದಲ್ಲಿ ಐದು ವಿಕೆಟ್ ಕೂಡ ಕಬಳಿಸಿರುವರು. ಸಿರಾಜ್ ಸಂಭ್ರಮಿಸಿರುವ ಫೋಟೊವನ್ನು ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.