ವಾಲಿಬಾಲ್ ಪಂದ್ಯಾಟ: ವಿಭಾಗ ಮಟ್ಟಕ್ಕೆ ಕಾಶಿಪಟ್ನದ ಐವರು ಬಾಲಕರು ಆಯ್ಕೆ

ವಾಲಿಬಾಲ್ ಪಂದ್ಯಾಟ: ವಿಭಾಗ ಮಟ್ಟಕ್ಕೆ ಕಾಶಿಪಟ್ನದ ಐವರು ಬಾಲಕರು ಆಯ್ಕೆ

YK   ¦    Sep 21, 2019 03:53:35 PM (IST)
ವಾಲಿಬಾಲ್ ಪಂದ್ಯಾಟ: ವಿಭಾಗ ಮಟ್ಟಕ್ಕೆ ಕಾಶಿಪಟ್ನದ ಐವರು ಬಾಲಕರು ಆಯ್ಕೆ

ಬೆಳ್ತಂಗಡಿ: ಈಚೆಗೆ ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ನ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಈ ವಿದ್ಯಾರ್ಥಿಗಳಲ್ಲಿ ಸಚಿನ್, ರಾಝಿಕಿಲ್ ಹಕೀಂ, ಕಿರಣ್, ಪವನ್ ಮತ್ತು ಆಕಾಶ್ ಎಂಬವರು ಅಕ್ಟೋಬರ್ 10 ಮತ್ತು 11ರಂದು ಕೊಡಗು ಜಿಲ್ಲೆಯಲ್ಲಿ ನಡೆಯುವ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ದೈಹಿಕ ಶಿಕ್ಷಕ ಸುಧಾಕರ ಹಾಗೂ ಝೈದ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕ ಮಂಡಳಿ, ಎಸ್ ಡಿಎಂ ಸಿ ಸಮಿತಿ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

More Images