ಧೋನಿ ಮತ್ತೆ ಆಡಲಿದ್ದಾರೆಂದು ನನಗನಿಸುತ್ತಿಲ್ಲ: ಹರ್ಭಜನ್ ಸಿಂಗ್

ಧೋನಿ ಮತ್ತೆ ಆಡಲಿದ್ದಾರೆಂದು ನನಗನಿಸುತ್ತಿಲ್ಲ: ಹರ್ಭಜನ್ ಸಿಂಗ್

HSA   ¦    Apr 24, 2020 04:04:54 PM (IST)
ಧೋನಿ ಮತ್ತೆ ಆಡಲಿದ್ದಾರೆಂದು ನನಗನಿಸುತ್ತಿಲ್ಲ: ಹರ್ಭಜನ್ ಸಿಂಗ್

ನವದೆಹಲಿ: ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಮಹೇಂದ್ರ ಸಿಂಗ್ ಧೋನಿ ಅವರು ದೇಶದ ಪರವಾಗಿ ಮತ್ತೆ ಆಡಲಿದ್ದಾರೆ ಎಂದು ನನಗನಿಸುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ರೋಹಿತ್ ಶರ್ಮಾ ಜತೆಗೆ ಲೈವ್ ಸೆಷನ್ ನಲ್ಲಿ ಮಾತನಾಡಿದ ಹರ್ಭಜನ್ ಅವರು, ಧೋನಿಗೆ ಏನಾಗುತ್ತಿದೆ ಎಂದು ತುಂಬಾ ಜನರು ಪ್ರಶ್ನೆ ಮಾಡುತ್ತಲಿದ್ದಾರೆ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ರೋಹಿತ್, ಇದರ ಬಗ್ಗೆ ಧೋನಿಗೆ ಮಾತ್ರ ತಿಳಿದಿದೆ. ಅವರಲ್ಲೇ ಈ ಪ್ರಶ್ನೆ ಕೇಳಬೇಕು ಎಂದರು.

ಧೋನಿ ಅವರು ಮತ್ತೆ ಆಡುತ್ತಾರೆಂದು ನನಗನಿಸುತ್ತಿಲ್ಲ. ವಿಶ್ವಕಪ್ ಅವರಿಗೆ ಕೊನೆಯ ಟೂರ್ನಿಯಾಗಿದೆ ಎಂದು ಹರ್ಭಜನ್ ತಿಳಿಸಿದರು.