ಯುವ ಆಟಗಾರರನ್ನು ದ್ರಾವಿಡ್ ಮಾನಸಿಕವಾಗಿ ಬಲಿಷ್ಠವಾಗಿಸಿರುವರು: ಇಂಜಾಮಾಮ್ ಹಕ್

ಯುವ ಆಟಗಾರರನ್ನು ದ್ರಾವಿಡ್ ಮಾನಸಿಕವಾಗಿ ಬಲಿಷ್ಠವಾಗಿಸಿರುವರು: ಇಂಜಾಮಾಮ್ ಹಕ್

HSA   ¦    Jan 23, 2021 10:07:11 AM (IST)
ಯುವ ಆಟಗಾರರನ್ನು ದ್ರಾವಿಡ್ ಮಾನಸಿಕವಾಗಿ ಬಲಿಷ್ಠವಾಗಿಸಿರುವರು: ಇಂಜಾಮಾಮ್ ಹಕ್

ನವದೆಹಲಿ: ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರು ಯುವ ಆಟಗಾರರನ್ನು ಮಾನಸಿಕವಾಗಿ ತುಂಬಾ ಬಲಿಷ್ಠವಾಗಿ ಮಾಡಿರುವರು ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಾಮಾಮ್ ಉಲ್ ಹಕ್ ಹೇಳಿರುವರು.

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವು ದಾಖಲಿಸಿಕೊಂಡಿರುವ ಭಾರತ ತಂಡದ ಸಾಧನೆಗೆ ಹಕ್ ಅವರು ದ್ರಾವಿಡ್ ಗುಣಗಾನ ಮಾಡಿರುವರು.

ರಿಷಬ್ ಪಂತ್, ಸುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಬೆಳವಣಿಗೆಯಲ್ಲಿ ದ್ರಾವಿಡ್ ಮಹತ್ವದ ಪಾತ್ರ ವಹಿಸಿರುವರು ಎಂದು ಹಕ್ ಅಭಿಪ್ರಾಯಪಟ್ಟಿದ್ದಾರೆ.

ಇದು ಭಾರತ 19 ಕೆಳಹರೆಯದಿಂದ ಆರಂಭವಾದ ಪ್ರಯಾಣವು ಬಳಿಕ ರಾಷ್ಟ್ರೀಯ ತಂಡಕ್ಕೆ ಕೊಂಡೊಯ್ದಿದೆ ಎಂದರು. ಆಸ್ಟ್ರೇಲಿಯಾದ ಪ್ರವಾಸದಲ್ಲಿ ಆಡಿದ್ದ ಹೆಚ್ಚಿನ ಯುವ ಆಟಗಾರರು ದ್ರಾವಿಡ್ ತರಬೇತಿಯಲ್ಲಿ ಪಳಗಿದವರು ಎನ್ನುವುದು ಮಹತ್ವದ ಅಂಶವಾಗಿದೆ.

ದ್ರಾವಿಡ್ ಅವರನ್ನು ಗೋಡೆ ಎಂದು ಕರೆಯಲು ಅವರು ಎಲ್ಲಾ ಪರಿಸ್ಥಿತಿಯಲ್ಲಿ ಆಡುವುದು ಕೂಡ ಕಾರಣವಾಗಿದೆ. ಅವರು ಯುವ ಆಟಗಾರರನ್ನು ಮಾನಸಿಕವಾಗಿ ಸದೃಢವಾಗಿ ಮಾಡಿದರು ಎಂದು ಹಕ್ ತಿಳಿಸಿದ್ದಾರೆ.