ಭಾರತಕ್ಕೆ ಆಸರೆಯಾದ ಪೂಜಾರ-ರೋಹಿತ್

ಭಾರತಕ್ಕೆ ಆಸರೆಯಾದ ಪೂಜಾರ-ರೋಹಿತ್

HSA   ¦    Oct 05, 2019 02:32:17 PM (IST)
ಭಾರತಕ್ಕೆ ಆಸರೆಯಾದ ಪೂಜಾರ-ರೋಹಿತ್

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಮಯಾಂಕ್ ಅಗರ್ವಾಲ್ ವಿಕೆಟ್ ಕಳಕೊಂಡ ಭಾರತಕ್ಕೆ ರೋಹಿತ್ ಶರ್ಮಾ(65) ಮತ್ತು ಚೇತೇಶ್ವರ ಪೂಜಾರ(65) ಆಸರೆಯಾದರು.

ಈ ಜೋಡಿ 150 ರನ್ ಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಭಾರತ 41 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 138 ರನ್ ಮಾಡಿದ್ದು, ಒಟ್ಟು 217 ರನ್ ಗಳ ಮುನ್ನಡೆಯಲ್ಲಿದೆ.

ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಅರ್ಧ ಶತಕ ಬಾರಿಸಿ ಉತ್ತಮ ಜತೆಯಾಟ ನಡೆಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 431 ರನ್ ಗಳಿಗೆ ಆಲೌಟ್ ಆಯಿತು. ನಿನ್ನೆ ಐದು ವಿಕೆಟ್ ಕಬಳಿಸಿದ್ದ ಅಶ್ವಿನ್ ತನ್ನ ಖಾತೆಗೆ ಇನ್ನೆರಡು ವಿಕೆಟ್ ಸೇರಿಸಿಕೊಂಡರು.