ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್ ಸೆಮಿಫೈನಲಿಗೇರಿದ ದೀಪಕ್ ಪೂನಿಯಾ

ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್ ಸೆಮಿಫೈನಲಿಗೇರಿದ ದೀಪಕ್ ಪೂನಿಯಾ

HSA   ¦    Sep 21, 2019 04:43:33 PM (IST)
ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್ ಸೆಮಿಫೈನಲಿಗೇರಿದ ದೀಪಕ್ ಪೂನಿಯಾ

ನವದೆಹಲಿ: ಕಝಕಿಸ್ತಾನದ ನುರ್ ಸುಲ್ತಾನ್ ನಲ್ಲಿ ನಡೆಯುತ್ತಿರುವ ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟು ದೀಪಕ್ ಪೂನಿಯಾ ಅವರು 2020ರ ಟೊಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಕೊಲಂಬಿಯಾದ ಕಾರ್ಲೊಸ್ ಮೆಂಡಿಸ್ ವಿರುದ್ಧ 7-6ರಿಂದ ಗೆಲುವು ದಾಖಲಿಸಿಕೊಂಡ ದೀಪಕ್ ಪೂನಿಯಾ ಅವರು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ಸೆಮಿಫೈನಲಿನಲ್ಲಿ ಪೂನಿಯಾ ಸ್ವಿಟ್ಜರ್ಲೆಂಡ್ ನ ಸ್ಟೆಫನ್ ರೀಚ್ಮತ್ ವಿರುದ್ಧ ಸೆಣಸಲಿದ್ದಾರೆ.