ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸಿಲ್ಲ: ಕೊಹ್ಲಿ

ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸಿಲ್ಲ: ಕೊಹ್ಲಿ

HSA   ¦    Nov 13, 2019 02:31:30 PM (IST)
ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸಿಲ್ಲ: ಕೊಹ್ಲಿ

ಇಂದೋರ್: ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲಿ ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಬಾಂಗ್ಲಾದೇಶದ ಯಾವುದೇ ಬ್ಯಾಟ್ಸ್ ಮೆನ್ ಅಥವಾ ಬೌಲರ್ ನ್ನು ನಾವು ಹಗುರವಾಗಿ ಪರಿಗಣಿಸಿಲ್ಲ. ಅವರು ಉತ್ತಮವಾಗಿ ಆಡಿದರೆ, ಆಗ ಅವರದ್ದು ಒಂದು ಕೌಶಲ್ಯಪೂರ್ಣ ತಂಡ ಎಂದು ಕೊಹ್ಲಿ ತಿಳಿಸಿದರು.

ಇಂದೋರ್ ನ ಹೊಲ್ಕರ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್ ಡೇ ನೈಟ್ ಟೆಸ್ಟ್ ಆಗಿರಲಿದೆ.

ಡೇ ನೈಟ್ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ ಅವರು, ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ನಾವು ತುಂಬಾ ಕಾತರಿಸಿದ್ದೇವೆ. ನಾನು ನಿನ್ನೆ ಪಿಂಕ್ ಬಾಲ್ ನಲ್ಲಿ ಆಡಿದೆ. ಇದು ಹೆಚ್ಚು ಸ್ವಿಂಗ್ ನೀಡುತ್ತದೆ. ಪಿಂಕ್ ಬಾಲ್ ಆಡಲು ನಾವು ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಇದು ಟೆಸ್ಟ್ ಕ್ರಿಕೆಟಿಗೆ ಒಳ್ಳೆಯ ಬದಲಾವಣೆ ಎಂದರು.