ಸನ್ ರೈಸರ್ಸ್ ವಿರುದ್ಧ ಗೆಲುವಿನ ಬೆಳಕು ಕಾಣದ ಡೆಲ್ಲಿ

ಸನ್ ರೈಸರ್ಸ್ ವಿರುದ್ಧ ಗೆಲುವಿನ ಬೆಳಕು ಕಾಣದ ಡೆಲ್ಲಿ

HSA   ¦    Sep 30, 2020 08:39:12 AM (IST)
ಸನ್ ರೈಸರ್ಸ್ ವಿರುದ್ಧ ಗೆಲುವಿನ ಬೆಳಕು ಕಾಣದ ಡೆಲ್ಲಿ

ದುಬೈ: ಕಳೆದ ಕೆಲವು ಪಂದ್ಯಗಳಲ್ಲಿ ಗೆಲುವನ್ನೇ ಕಾಣುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, ಐಪಿಎಲ್ ನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲುಂಡಿದೆ.

ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟಿಗೆ 162 ರನ್ ಮಾಡಿತ್ತು. ಇದಕ್ಕೆ ಉತ್ತರಿಸಿದ ಡೆಲ್ಲಿ, ಹೈದರಾಬಾದ್ ಬೌಲರ್ ಗಳ ಕರಾರುವಕ್ಕಾದ ಬೌಲಿಂಗ್ ದಾಳಿಯ ಮುಂದೆ ಕುಸಿತಕ್ಕೆ ಒಳಗಾಯಿತು. ಶಿಖರ್ ಧವನ್(34) ಮತ್ತು ರಿಷಬ್ ಪಂತ್(28) ರನ್ ಮಾಡಿದರೂ ಡೆಲ್ಲಿಗೆ ಗೆಲುವು ಸಾಧ್ಯವಾಗಲಿಲ್ಲ.

ಹೈದರಾಬಾದ್ ಪರ ರಶೀದ್ ಖಾನ್ 3, ಭುವನೇಶ್ವರ್ 2 ವಿಕೆಟ್ ಉರುಳಿಸಿದರು.

ಸನ್ ರೈಸರ್ಸ್ ನಾಯಕ ಡೇವಿಡ್ ವಾರ್ನರ್(41) ಮತ್ತು ಜಾನಿ ಬೈಸ್ಟ್ರೋವ್(53) ರನ್ ಮಾಡಿ ತಂಡದ ಉತ್ತಮ ಮೊತ್ತಕ್ಕೆ ನೆರವಾದರು.