ದೇಶೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ ಜೆಪಿ ಡ್ಯುಮಿನಿ

ದೇಶೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ ಜೆಪಿ ಡ್ಯುಮಿನಿ

HSA   ¦    May 06, 2019 06:30:17 PM (IST)
ದೇಶೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ ಜೆಪಿ ಡ್ಯುಮಿನಿ

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮೆನ್ ಜೆಪಿ ಡ್ಯುಮಿನಿ ಅವರು ದೇಶೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ.

ಇತ್ತೀಚೆಗೆ ಸಿಎಸ್ ಎ ಟಿ20ಯಲ್ಲಿ ಕೇಪ್ ಕೋಬ್ರಾ ಪರವಾಗಿ ಆಡಿದ್ದ ಡ್ಯುಮಿನಿ ಅವರ ತಂಡವು ಸೆಮಿಫೈನಲ್ ನಲ್ಲಿ ವಾರಿಯರ್ಸ್ ವಿರುದ್ಧ ಸೋಲುಂಡಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ವಿಶ್ವಕಪ್ ಆರಂಭವಾಗುವ ತಿಂಗಳ ಮೊದಲೇ 35ರ ಹರೆಯದ ಡ್ಯುಮಿನಿ ಅವರು ದೇಶೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.

ಸಪ್ಟೆಂಬರ್ 2017ರಲ್ಲಿ ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿ ಹೊಂದಿದ್ದ ಡ್ಯುಮಿನಿ ವಿಶ್ವಕಪ್ ಕ್ರಿಕೆಟ್ ಬಳಿಕ ಏಕದಿನದಿಂದಲೂ ನಿವೃತ್ತಿ ಹೊಂದಲಿರುವರು.

ದಕ್ಷಿಣ ಆಫ್ರಿಕಾ ಕ್ರಿಕೆಟ್ ನ ಅಧಿಕೃತ ವೆಬ್ ಸೈಟ್ ಟಿ20 ಕ್ರಿಕೆಟ್ ನಲ್ಲಿ ತಂಡದ ಪರವಾಗಿ ಆಡಲಿದ್ದಾರೆ ಎಂದು ದೃಢಪಡಿಸಿದೆ.