ಇಂಗ್ಲೆಂಡ್ ವಿರುದ್ಧ 25 ರನ್ ಗಳ ಜಯಗಳಿಸಿದ ಭಾರತ ತಂಡ

ಇಂಗ್ಲೆಂಡ್ ವಿರುದ್ಧ 25 ರನ್ ಗಳ ಜಯಗಳಿಸಿದ ಭಾರತ ತಂಡ

MS   ¦    Mar 06, 2021 06:56:02 PM (IST)
ಇಂಗ್ಲೆಂಡ್ ವಿರುದ್ಧ 25 ರನ್ ಗಳ ಜಯಗಳಿಸಿದ ಭಾರತ ತಂಡ

ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ ಭಾರತ ತಂಡ 25 ರನ್ ಗಳ ಜಯ ಗಳಿಸಿದೆ. ಹಾಗೂ ಈ ಗೆಲುವಿನಿಂದ ಭಾರತಕ್ಕೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ಸ್ ಗೆ ಅರ್ಹತೆ ಪಡೆಯುವುದಕ್ಕೆ ಸಹಕಾರಿಯಾಗಿರಲಿದೆ.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನ ಮೂರನೇ ದಿನದಾಟದ ಚಹಾವಿರಾಮದ ವೇಳೆಗೆ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. 135 ರನ್ ಗಳಿಗೆ ಇಂಗ್ಲೆಂಡ್ ತಂಡ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಭಾರತದೆದುರು ಸೋಲೊಪ್ಪಿಕೊಂಡಿತು.