ಕ್ರಿಕೆಟಿನಿಂದ ನಿವೃತ್ತಿಯಾಗದಂತೆ ಧೋನಿಗೆ ಗಾನಕೋಗಿಲೆ ಮನವಿ

ಕ್ರಿಕೆಟಿನಿಂದ ನಿವೃತ್ತಿಯಾಗದಂತೆ ಧೋನಿಗೆ ಗಾನಕೋಗಿಲೆ ಮನವಿ

HSA   ¦    Jul 11, 2019 06:46:02 PM (IST)
ಕ್ರಿಕೆಟಿನಿಂದ ನಿವೃತ್ತಿಯಾಗದಂತೆ ಧೋನಿಗೆ ಗಾನಕೋಗಿಲೆ ಮನವಿ

ಮುಂಬಯಿ: ವಿಶ್ವಕಪ್ ಕ್ರಿಕೆಟ್ ನ ಸೆಮಿಫೈನಲಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರು ಎಲ್ಲಾ ಮಟ್ಟದ ಕ್ರಿಕೆಟಿಗೆ ವಿದಾಯ ಹೇಳುತ್ತಾರೆ ಎನ್ನುವ ಮಾತು ಕೇಳಿಬರುತ್ತಿದ್ದಂತೆ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗೆ ನಿವೃತ್ತಿಯಾಗದಂತೆ ಮನವಿ ಮಾಡಿಕೊಂಡಿದ್ದಾರೆ.

ವಿಶ್ವಕಪ್ ನಲ್ಲಿ ಟೀಂ ಇಂಡಿಯಾವು ಫೈನಲಿಗೇರಲು ವಿಫಲವಾದ ಬಳಿಕ ಧೋನಿ ಎಲ್ಲಾ ವಿಧದ ಕ್ರಿಕೆಟಿನಿಂದ ನಿವೃತ್ತಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಲತಾ ಮಂಗೇಶ್ಕರ್ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಧೋನಿಗೆ ವಿದಾಯ ಘೋಷಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಅವರು ಬರೆದಿರುವ ಟ್ವೀಟ್ ಈ ರೀತಿಯಾಗಿದೆ...
ನಮಸ್ಕಾರ್ ಎಂ.ಎಸ್.ಧೋನಿ ಜೀ. ನೀವು ನಿವೃತ್ತರಾಗಲಿದ್ದೀರಿ ಎನ್ನುವ ಮಾತುಗಳನ್ನು ನಾನು ಇಂದಿನ ದಿನಗಳಲ್ಲಿ ಕೇಳುತ್ತಿದ್ದೇವೆ. ದಯವಿಟ್ಟು ಹಾಗೆ ಆಲೋಚಿಸಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಬಗ್ಗೆ ನೀವು ಆಲೋಚನೆ ಮಾಡಲೇಬಾರದು ಎಂದು ಬರೆದಿದ್ದಾರೆ.