ತರಬೇತಿ ಶಿಬಿರ ಆರಂಭವಾದರೆ ತುಂಬಾ ಅನುಕೂಲ: ಶಮಿ

ತರಬೇತಿ ಶಿಬಿರ ಆರಂಭವಾದರೆ ತುಂಬಾ ಅನುಕೂಲ: ಶಮಿ

HSA   ¦    Jul 11, 2020 03:18:58 PM (IST)
ತರಬೇತಿ ಶಿಬಿರ ಆರಂಭವಾದರೆ ತುಂಬಾ ಅನುಕೂಲ: ಶಮಿ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತರಬೇತಿ ಶಿಬಿರಗಳನ್ನು ಮರು ಆರಂಭಿಸಿದರೆ ಅದರಿಂದ ತನಗೆ ಹೆಚ್ಚಿನ ಲಾಭವಾಗಲಿದೆ ಎಂದು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ತಿಳಿಸಿದರು.

ಕೊರೋನಾದಿಂದಾಗಿ ಈಗ ಕ್ರಿಕೆಟ್ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಇದರಲ್ಲಿ ಆಟಗಾರರ ತರಬೇತಿ ಕೂಡ ಸೇರಿದೆ.

ಕೊರೋನಾ ವೈರಸ್ ನಿಂದಾಗಿ ಸರಿಯಾದ ರೀತಿಯಲ್ಲಿ ತರಬೇತಿ ಮತ್ತು ದೈನಂದಿನ ವರ್ಕ್ ಔಟ್ ಗೆ ತುಂಬಾ ತೊಂದರೆ ಆಗುತ್ತಿದೆ ಮತ್ತು ತರಬೇತಿ ಶಿಬಿರಗಳು ಆರಂಭವಾದರೆ ಅದು ತುಂಬಾ ನೆರವಿಗೆ ಬರುವುದು ಎಂದು ಹೇಳಿದರು.

ಬೇರೆ ಆಟಗಾರರು ಕೂಡ ತರಬೇತಿ ಶಿಬಿರಗಳು ಮರು ಆರಂಭವಾಗಬೇಕು ಎಂದು ಹೇಳುತ್ತಲಿದ್ದಾರೆ.