ಜನವರಿ ತನಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ಧೋನಿ ದೂರ!

ಜನವರಿ ತನಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ಧೋನಿ ದೂರ!

HSA   ¦    Nov 28, 2019 11:26:52 AM (IST)
ಜನವರಿ ತನಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ಧೋನಿ ದೂರ!

ಮುಂಬಯಿ: ಜನವರಿ ತನಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಆಲೋಚನೆಯಿಲ್ಲ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಹೇಳಿದ್ದಾರೆ.

ಮುಂಬಯಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಧೋನಿ ಅವರು ಈ ಹೇಳಿಕೆ ನೀಡಿದರು.

ಈ ವರ್ಷದ ಜುಲೈಯಲ್ಲಿ ನಡೆದ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಬಳಿಕ ಧೋನಿ ಕ್ರಿಕೆಟಿನಿಂದ ವಿಶ್ರಾಂತಿ ಪಡೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಧೋನಿ ಕಳೆದುಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧವು ಅವರು ಆಡಿರಲಿಲ್ಲ.

ಡಿಸೆಂಬರ್ 6ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಕೂಡ ಧೋನಿ ಆಡುವುದಿಲ್ಲ.