ಐಪಿಎಲ್ ಹಂಗಾಮ: ಗೆಲುವಿನೊಂದಿಗೆ ಆರ್‌ಸಿಬಿ ಶುಭಾರಂಭ

ಐಪಿಎಲ್ ಹಂಗಾಮ: ಗೆಲುವಿನೊಂದಿಗೆ ಆರ್‌ಸಿಬಿ ಶುಭಾರಂಭ

YK   ¦    Sep 22, 2020 09:18:28 AM (IST)
ಐಪಿಎಲ್ ಹಂಗಾಮ: ಗೆಲುವಿನೊಂದಿಗೆ ಆರ್‌ಸಿಬಿ ಶುಭಾರಂಭ

ದುಬೈ: ಸನ್ ರೈಸರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯಾಟದಲ್ಲಿ ಆರ್‌ಸಿಬಿ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ಸೋಮವಾರ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದರೂ 10 ರನ್ ಗಳಿಂದ ಪಂದ್ಯದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಮೊದಲು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್‌ಗಳನ್ನು ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಸನ್‌ರೈಸರ್ಸ್ ತಂಡವು 19.4 ಓವರ್ ಗಳಲ್ಲಿ 150 ರನ್‌ಗಳಿಸಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 10 ರನ್ ಗಳ ಅಂತರದಲ್ಲಿ ಸೋಲೋಪ್ಪಿಕೊಂಡಿತು.