ಭಾರತ ಪ್ರವಾಸಕ್ಕೆ ವಿಂಡೀಸ್ ಏಕದಿನ ತಂಡ ಪ್ರಕಟ: ಗೇಲ್ ಅಲಭ್ಯ

ಭಾರತ ಪ್ರವಾಸಕ್ಕೆ ವಿಂಡೀಸ್ ಏಕದಿನ ತಂಡ ಪ್ರಕಟ: ಗೇಲ್ ಅಲಭ್ಯ

HSA   ¦    Oct 08, 2018 02:54:53 PM (IST)
ಭಾರತ ಪ್ರವಾಸಕ್ಕೆ ವಿಂಡೀಸ್ ಏಕದಿನ ತಂಡ ಪ್ರಕಟ: ಗೇಲ್ ಅಲಭ್ಯ

ಬಾರ್ಬಡೋಸ್: ಭಾರತ ವಿರುದ್ಧ ನಡೆಯಲಿರುವ ಟಿ-20 ಮತ್ತು ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ತಂಡವನ್ನು ಪ್ರಕಟಿಸಿದ್ದು, ಸ್ಟಾರ್ ಆಟಗಾರ ಕ್ರಿಸ್ ಗೇಲ್ ಅಲಭ್ಯರಾಗಿದ್ದಾರೆ.

ಜಾಸನ್ ಹೋಲ್ಡರ್ ಅವರು ಏಕದಿನ ತಂಡವನ್ನು ಮುನ್ನಡೆಸಿದರೆ, ಟಿ-20 ತಂಡಕ್ಕೆ ಕಾರ್ಲೊಸ್ ಬ್ರಾಥ್ವೈಟ್ ನಾಯಕತ್ವವಿರಲಿದೆ. ವೈಯಕ್ತಿಕ ಕಾರಣಗಳಿಂದಾಗಿ ಗೇಲ್ ಅವರು ಸರಣಿಯಿಂದ ಹೊರಗುಳಿಯಲು ಬಯಸಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿ ಹಾಗೂ 2019ರ ವಿಶ್ವಕಪ್ ಗೆ ಲಭ್ಯರಿರುತ್ತಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ವಿಂಡೀಸ್ ತಂಡಕ್ಕೆ ಯುವ ಆರಂಭಿಕ ಆಟಗಾರ ಹೇಮರಾಜ್ ಚಂದ್ರಪೌಲ್, ಆಲ್ ರೌಂಡರ್ ಫಾಬಿಯನ್ ಅಲೇನ್ ಮತ್ತು ವೇಗಿ ಒಶನೆ ಥಾಮಸ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಕೆರನ್ ಪೊಲ್ಲಾರ್ಡ್, ಡರೆನ್ ಬ್ರಾವೋ ಮತ್ತು ಆಂಡ್ರೆ ರಸೆಲ್ ಟಿ-20 ತಂಡಕ್ಕೆ ಮರಳಿದ್ದಾರೆ.

ಏಕದಿನ ತಂಡ: ಜಾಸನ್ ಹೋಲ್ಡರ್(ನಾಯಕ), ಫಾಬಿಯನ್ ಅಲೇನ್, ಸುನಿಲ್ ಅಂಬ್ರಿಸ್, ದೇವೇಂದ್ರ ಬಿಶೂ, ಚಂದ್ರಪೌಲ್ ಹೇಮರಾಜ್, ಶಿಮರಾನ್ ಹೆತ್ಮಯೆರ್, ಶಾಯಿ ಹೊಪ್, ಅಲ್ಝರ್ರಿ ಜೋಸೆಫ್, ಎವಿನ್ ಲೇವಿಸ್, ಆಶ್ಲೆ ನರ್ಸೆ, ಕೀಮೊ ಪೌಲ್, ರೊವ್ಮನ್ ಪವೆಲ್, ಕೆಮರ್ ರೋಚ್, ಮರ್ಲೊನ್ ಸ್ಯಾಮುವೆಲ್ಸ್, ಒಶನೆ ಥಾಮಸ್.

ಟಿ-20 ತಂಡ: ಕಾರ್ಲೊಸ್ ಬ್ರಾಥ್ವೈಟ್(ನಾಯಕ), ಫಾಬಿಯನ್ ಅಲೇನ್, ಡರೆನ್ ಬ್ರಾವೋ, ಶಿಮರಾನ್ ಹೆತ್ಮಯೆರ್, ಎವಿನ್ ಲೆವಿಸ್, ಒಬೆದ್ ಮೆಕಾಯ್, ಅಶ್ಲೆ ನರ್ಸಿ, ಕೀಮೊ ಪೌಲ್, ಖಾರಿ ಪಿಯರ್ರೆ, ಕೆರನ್ ಪೊಲಾರ್ಡ್, ರೊವ್ಮನ್ ಪಾವೆಲ್, ದಿನೇಸ್ ರಾಮ್ ದಿನ್, ಆಂಡ್ರೆ ರಸೆಲ್, ಶೆರಫಾನೆ ರುಥರ್ಫೋರ್ಡ್, ಒಶನೆ ಥಾಮಸ್.