ದಕ್ಷಿಣ ಆಫ್ರಿಕಾದ ಮೂವರು ಆಟಗಾರರು ಕ್ವಾರಂಟೈನ್ ಗೆ

ದಕ್ಷಿಣ ಆಫ್ರಿಕಾದ ಮೂವರು ಆಟಗಾರರು ಕ್ವಾರಂಟೈನ್ ಗೆ

HSA   ¦    Nov 19, 2020 07:57:36 PM (IST)
ದಕ್ಷಿಣ ಆಫ್ರಿಕಾದ ಮೂವರು ಆಟಗಾರರು ಕ್ವಾರಂಟೈನ್ ಗೆ

ಕೇಪ್ ಟೌನ್: ಇಂಗ್ಲೆಂಡ್ ವಿರುದ್ಧದ ಸರಣಿಗೆ ತಯಾರಾಗುತ್ತಿರುವ ದಕ್ಷಿಣ ಆಫ್ರಿಕಾದ ಮೂರು ಮಂದಿ ಆಟಗಾರರು ಕ್ವಾರಂಟೈನ್ ಗೆ ಒಳಗಾಗಿರುವರು.

ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರ ಕೊರೊನಾ ಪಾಸಿಟಿವ್ ಆಗಿದ್ದು, ಇದರಿಂದ ಇತರ ಇಬ್ಬರನ್ನು ಕೂಡ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಕೊರೊನಾ ಪಾಸಿಟಿವ್ ಆದ ಆಟಗಾರನೊಂದಿಗೆ ಇವರಿಬ್ಬರು ಸಂಪರ್ಕದಲ್ಲಿದ್ದರು ಎಂದು ಕ್ರಿಕೆಟ್ ಸೌತ್ ಆಫ್ರಿಕಾ(ಸಿಎಸ್ ಎ) ಹೇಳಿದೆ.

ಮೂರು ಮಂದಿಗೆ ಕೂಡ ಕೊರೋನಾದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಹೇಳಲಾಗಿದೆ. ವೈದ್ಯಕೀಯ ತಂಡವು ಇವರ ಮೇಲೆ ನಿಗಾ ಇಟ್ಟಿದೆ.