ಯುವ ಆಟಗಾರರಿಗೆ ಸಚಿನ್ ಉಚಿತ ಆನ್ ಲೈನ್ ತರಬೇತಿ

ಯುವ ಆಟಗಾರರಿಗೆ ಸಚಿನ್ ಉಚಿತ ಆನ್ ಲೈನ್ ತರಬೇತಿ

HSA   ¦    Feb 23, 2021 12:06:37 PM (IST)
ಯುವ ಆಟಗಾರರಿಗೆ ಸಚಿನ್ ಉಚಿತ ಆನ್ ಲೈನ್ ತರಬೇತಿ

ಮುಂಬಯಿ: ಭಾರತ ಕ್ರಿಕೆಟ್ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಯುವ ಕ್ರಿಕೆಟಿಗರಿಗಾಗಿ ಉಚಿತ ಶಿಬಿರನ್ನು ನೀಡುತ್ತಿದ್ದಾರೆ.

ಆನ್ ಲೈನ್ ನ ಅನ್ ಅಕಾಡಮಿಯು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿ ಕಿರಿಯ ಆಟಗಾರರು ಅವರಿಂದ ಸಲಹೆ ಹಾಗೂ ತರಬೇತಿ ಪಡೆಯಬಹುದು.

ಇಲ್ಲಿ ಕಲಿಯಲು ಬಯಸುವವರಿಗೆ ಉಚಿತವಾಗಿ ಸಲಹೆ ಹಾಗೂ ತರಬೇತಿ ನೀಡಲಾಗುವುದು. ಎಲ್ಲವೂ ಉಚಿತವಾಗಿ ಇರಲಿದೆ ಎಂದು ವರದಿಗಳು ತಿಳಿಸಿವೆ.

ಯಾರು ಕೂಡ ಇದರಲ್ಲಿ ಭಾಗಿಯಾಗಬಹುದು. ನನ್ನ ಅನುಭವ ಹಂಚಿಕೊಳ್ಳುವುದು ಮುಖ್ಯವಾಗಿತ್ತು. ನಾನು ಮೈದಾನದಲ್ಲಿ ಹುಡುಗರಿಗೆ ತರಬೇತಿ ನೀಡಿದ್ದೇನೆ. ಆದರೆ ಆನ್ ಲೈನ್ ನಲ್ಲಿ ಇದೇ ಮೊದಲ ಸಲ. ಇಲ್ಲಿ ಕ್ರಿಕೆಟಿನ ಬಗ್ಗೆ ನನ್ನಲ್ಲಿ ಸಲಹೆಗಳನ್ನು ಕೇಳಬಹುದು ಎಂದು ಸಚಿನ್ ತಿಳಿಸಿದರು.