ಇಂಡಿಯಾ ಓಪನ್ ಚಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಮೇರಿ ಕೋಮ್

ಇಂಡಿಯಾ ಓಪನ್ ಚಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಮೇರಿ ಕೋಮ್

HSA   ¦    May 14, 2019 11:39:35 AM (IST)
ಇಂಡಿಯಾ ಓಪನ್ ಚಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಮೇರಿ ಕೋಮ್

ನವದೆಹಲಿ: ಇಂಡಿಯಾ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಕಣಕ್ಕಿಳಿಯಲಿದ್ದಾರೆ.

ಮೇ 20ರಿಂದ 24ರ ತನಕ ಗುವಾಹಟಿಯ ಕರಮ್ ಬೀರ್ ನಬೀನ್ ಚಂದ್ರ ಬೋರ್ಡೊಲೊಯ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯಾ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿವಿಧ ದೇಶಗಳ ಸುಮಾರು 200ಕ್ಕೂ ಹೆಚ್ಚು ಬಾಕ್ಸರ್ ಗಳು ಸ್ಪರ್ಧಿಸಲಿರುವರು.

ವಿಶ್ವ ಚಾಂಪಿಯನ್ ಶಿಪ್ ನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇರಿ ಕೋಮ್ ಅವರು ಈ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸೆಣಸಲಿದ್ದಾರೆ.