ಚೆನ್ನೈ ಸೂಪರ್ ಕಿಂಗ್ಸ್ ಗೆ ಸುರೇಶ್ ರೈನಾ ಅಗತ್ಯವಿಲ್ಲವೇ?

ಚೆನ್ನೈ ಸೂಪರ್ ಕಿಂಗ್ಸ್ ಗೆ ಸುರೇಶ್ ರೈನಾ ಅಗತ್ಯವಿಲ್ಲವೇ?

HSA   ¦    Sep 30, 2020 11:43:04 AM (IST)
ಚೆನ್ನೈ ಸೂಪರ್ ಕಿಂಗ್ಸ್ ಗೆ ಸುರೇಶ್ ರೈನಾ ಅಗತ್ಯವಿಲ್ಲವೇ?

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಯುಎಇಯಲ್ಲಿ ನಡೆಯುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಹೋಗಿದ್ದ ಸುರೇಶ್ ರೈನಾಗೆ ತಂಡದ ಬಾಗಿಲು ಮುಚ್ಚಿದಂತೆ ಕಾಣುತ್ತಿದೆ.

ತಂಡದ ತರಬೇತಿ ಶಿಬಿರದ ಬಳಿಕ ಯುಎಇಗೆ ತೆರಳಿದ್ದ ರೈನಾ ಹಠಾತ್ ಆಗಿ ಸ್ವದೇಶಕ್ಕೆ ಹಿಂತಿರುಗುವ ನಿರ್ಧಾರ ಮಾಡಿದ್ದರು ಮತ್ತು ಐಪಿಎಲ್ ನಿಂದ ಹೊರಗುಳಿಯುವುದಾಗಿ ಸೂಚಿಸಿದ್ದರು.

ತಂಡದ ಉಪನಾಯಕನಾಗಿದ್ದ ರೈನಾ ತಂಡಕ್ಕೆ ಮರಳಲು ಬಯಸಿದ್ದರೂ ಈಗ ತಂಡದ ಆಡಳಿತಕ್ಕೆ ಮಾತ್ರ ಅವರ ಅಗತ್ಯವಿದ್ದಂತೆ ಕಾಣಿಸುತ್ತಿಲ್ಲ. ಯಾಕೆಂದರೆ ತಂಡದ ವೆಬ್ ಸೈಟ್ ನಿಂದ ಅವರ ಹೆಸರನ್ನು ತೆಗೆದುಹಾಕಿದೆ. ಅದೇ ರೀತಿಯಾಗಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೆಸರು ಕೂಡ ವೆಬ್ ಸೈಟ್ ನಿಂದ ಮಾಯವಾಗಿದೆ.