ಪಂಜಾಬ್ ತಂಡವನ್ನು ಮುನ್ನಡೆಸಲು ಉತ್ಸುಕನಾಗಿರುವೆ: ಕೆ.ಎಲ್.ರಾಹುಲ್

ಪಂಜಾಬ್ ತಂಡವನ್ನು ಮುನ್ನಡೆಸಲು ಉತ್ಸುಕನಾಗಿರುವೆ: ಕೆ.ಎಲ್.ರಾಹುಲ್

HSA   ¦    Jun 24, 2020 05:01:42 PM (IST)
ಪಂಜಾಬ್ ತಂಡವನ್ನು ಮುನ್ನಡೆಸಲು ಉತ್ಸುಕನಾಗಿರುವೆ: ಕೆ.ಎಲ್.ರಾಹುಲ್

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಮುನ್ನಡೆಸಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಕೆ.ಎಲ್. ರಾಹುಲ್ ತಿಳಿಸಿದರು.

ಕೊರೋನಾದಿಂದಾಗಿ ಈ ವರ್ಷ ಮಾರ್ಚ್ ಅಂತ್ಯಕ್ಕೆ ನಡೆಯಬೇಕಾಗಿದ್ದ ಐಪಿಎಲ್ ಮುಂದೂಡಲ್ಪಟ್ಟಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ರದ್ದುಗೊಂಡರೆ ಆಗ ಐಪಿಎಲ್ ನಡೆಸಲು ಬಿಸಿಸಿಐ ಆಲೋಚಿಸುತ್ತಿದೆ.

2018 ಮತ್ತು 2019ರಲ್ಲಿ ತಂಡವನ್ನು ಮುನ್ನಡೆಸಿದ್ದ ರವಿಚಂದ್ರನ್ ಅಶ್ಚಿನ್ ದೆಹಲಿ ಕ್ಯಾಪಿಟಲ್ಸ್ ಗೆ ಹೋಗಿರುವ ಕಾರಣದಿಂದಾಗಿ ರಾಹುಲ್ ತಂಡವನ್ನು ಮುನ್ನಡೆಸುವರು.

ಐಪಿಎಲ್ ನ್ನು ನಾನು ತುಂಬಾ ಕಳಕೊಂಡಿದ್ದೇವೆ. ಇದು ವರ್ಷದ ಅತೀ ದೊಡ್ಡ ಟೂರ್ನಿ ಮತ್ತು ಒಂದು ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದು ಐಪಿಎಲ್ ನ ವೆಬ್ ಸೈಟ್ ನಲ್ಲಿರುವ ಚರ್ಚೆಯಲ್ಲಿ ಅವರು ತಿಳಿಸಿದರು.