ಭಾರತದಲ್ಲಿ ಸಾಕಷ್ಟು ಹಣವಿದೆ: ಅಖ್ತರ್ ಗೆ ತಿರುಗೇಟು ನೀಡಿದ ಕಪಿಲ್

ಭಾರತದಲ್ಲಿ ಸಾಕಷ್ಟು ಹಣವಿದೆ: ಅಖ್ತರ್ ಗೆ ತಿರುಗೇಟು ನೀಡಿದ ಕಪಿಲ್

HSA   ¦    Apr 09, 2020 05:39:05 PM (IST)
ಭಾರತದಲ್ಲಿ ಸಾಕಷ್ಟು ಹಣವಿದೆ: ಅಖ್ತರ್ ಗೆ ತಿರುಗೇಟು ನೀಡಿದ ಕಪಿಲ್

ನವದೆಹಲಿ: ಕೊರೋನಾ ಸೋಂಕಿತರಿಗಾಗಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮೂರು ಏಕದಿನ ಪಂದ್ಯಗಳನ್ನು ನಡೆಸಬೇಕು ಎಂದು ಸಲಹೆ ನೀಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಭಾರತಕ್ಕೆ ಹಣದ ಅಗತ್ಯವಿಲ್ಲ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪ್ರೇಕ್ಷರಿಲ್ಲದೆ ಮೂರು ಏಕದಿನ ಪಂದ್ಯಗಳನ್ನು ನಡೆಸಬೇಕು ಎಂದು ಅಖ್ತರ್ ಸಲಹೆ ನೀಡಿದ್ದರು.

ಅಖ್ತರ್ ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ನಮಗೆ ಹಣ ಸಂಗ್ರಹಿಸುವ ಅಗತ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಹಣವಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ರಾಜಕಾರಣಿಗಳು ಟಿವಿ ಚಾನೆಲ್ ಗಳಲ್ಲಿ ಟೀಕೆ ಮಾಡುವುದನ್ನು ನಿಲ್ಲಿಸಲು ಎಂದು ಕಪಿಲ್ ದೇವ್ ತಿಳಿಸಿದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗಾಗಲೇ 51 ಕೋಟಿ ರೂಪಾಯಿ ದೇನಿಗೆ ನೀಡಿದೆ. ಇನ್ನು ಹೆಚ್ಚು ಅದು ನೀಡಬಲ್ಲದು. ಅದಕ್ಕೆ ಹಣ ಸಂಗ್ರಹಿಸಬೇಕಾದ ಅಗತ್ಯವಿಲ್ಲ ಎಂದರು.