ಪ್ರಧಾನಿ ಸಲಹೆ ಪಾಲಿಸಲು ದೇಶದ ಜನರಿಗೆ ಕೊಹ್ಲಿ ವಿನಂತಿ

ಪ್ರಧಾನಿ ಸಲಹೆ ಪಾಲಿಸಲು ದೇಶದ ಜನರಿಗೆ ಕೊಹ್ಲಿ ವಿನಂತಿ

HSA   ¦    Mar 20, 2020 02:15:14 PM (IST)
ಪ್ರಧಾನಿ ಸಲಹೆ ಪಾಲಿಸಲು ದೇಶದ ಜನರಿಗೆ ಕೊಹ್ಲಿ ವಿನಂತಿ

ನವದೆಹಲಿ: ಮಾರಣಾಂತಿಕ  ಕೊರೋನಾ ವೈರಸ್ ಈಗ ಜಗತ್ತಿನೆಲ್ಲೆಡೆಗೆ ವ್ಯಾಪಿಸುತ್ತಿದ್ದು, ಇದರಿಂದ ಪಾರಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿರುವ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೇಶದ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಕೊರೋನಾ ವೈರಸ್ ನ್ನು ದೂರ ಮಾಡಲು ಎಚ್ಚರಿಕೆಯಿಂದ ಇರಿ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಹೋಗಿ ಎಂದು ಕೊಹ್ಲಿ ತನ್ನ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ದೇಶದಲ್ಲಿ ಸೇವೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್ ಗಳನ್ನು ಕೊಹ್ಲಿ ಶ್ಲಾಘಿಸಿದ್ದಾರೆ. ಕಠಿಣ ಸಮಯದಲ್ಲಿ ವೈದ್ಯಕೀಯ ವಲಯದವರು ತುಂಬಾ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.