ವಲಸೆ ಕಾರ್ಮಿಕರ ಮಾಜಿ ಕ್ರಿಕೆಟಿಗ ಸೆಹ್ವಾಗ್ ನೆರವು

ವಲಸೆ ಕಾರ್ಮಿಕರ ಮಾಜಿ ಕ್ರಿಕೆಟಿಗ ಸೆಹ್ವಾಗ್ ನೆರವು

HSA   ¦    May 30, 2020 05:20:52 PM (IST)
ವಲಸೆ ಕಾರ್ಮಿಕರ ಮಾಜಿ ಕ್ರಿಕೆಟಿಗ ಸೆಹ್ವಾಗ್ ನೆರವು

ನವದೆಹಲಿ: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಅವರ ಮನೆಯವರು ಲಾಕ್ ಡೌನ್ ನಿಂದ ತೊಂದರೆಯಲ್ಲಿಇರುವಂತಹ ವಲಸೆ ಕಾರ್ಮಿಕರಿಗೆ ಊಟ ನೀಡುತ್ತಿದ್ದಾರೆ.

ಮನೆಯಲ್ಲೇ ತಯಾರಿಸಿದ ಆಹಾರವನ್ನು ಅವರು ಪ್ಯಾಕ್ ಮಾಡಿಕೊಂಡು ತೊಂದರೆಯಲ್ಲಿ ಸಿಲುಕಿರುವಂತಹ ವಲಸೆ ಕಾರ್ಮಿಕರಿಗೆ ನೀಡುತ್ತಿರುವ ಕೆಲವೊಂದು ಫೋಟೊಗಳನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಕೊವಿಡ್-19 ಸಂಕಷ್ಟದ ಸಮಯದಲ್ಲಿ ದೇಶದ ಪ್ರತಿಯೊಬ್ಬರು ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎಂದು 41ರ ಹರೆಯದ ಮಾಜಿ ಆರಂಭಿಕ ಆಟಗಾರ ಮನವಿ ಮಾಡಿಕೊಂಡಿರುವರು.