ಪಾಕ್ ಕ್ರಿಕೆಟಿಗನ ಪುತ್ರಿ ಕ್ಯಾನ್ಸರ್ ಗೆ ಬಲಿ

ಪಾಕ್ ಕ್ರಿಕೆಟಿಗನ ಪುತ್ರಿ ಕ್ಯಾನ್ಸರ್ ಗೆ ಬಲಿ

HSA   ¦    May 20, 2019 05:21:25 PM (IST)
ಪಾಕ್ ಕ್ರಿಕೆಟಿಗನ ಪುತ್ರಿ ಕ್ಯಾನ್ಸರ್ ಗೆ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನ ಖ್ಯಾತ ಕ್ರಿಕೆಟಿಗ ಆಸಿಫ್ ಅಲಿಯವರ ಎರಡು ವರ್ಷದ ಪುತ್ರಿ ನೂರ್ ಫಾತಿಮಾ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.

ಅಸೀಫ್ ಅಲಿ ಪಾಕ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅವರು ಮಗಳ ಸಾವಿನ ಸುದ್ದಿ ಕೇಳಿದ ಬಳಿಕ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ. ಫಾತಿಮಾ ಅವರು ಅಮೆರಿಕಾದಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಿನ್ನೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಡಿದ್ದ ಆಸೀಫ್ ಅಲಿ 22 ರನ್ ಗಳಿಸಿದ್ದರು. ಮೊದಲ ಪಂದ್ಯ ಮಳೆಗೀಡಾಗಿದ್ದ ಬಳಿಕ ಉಳಿದ ನಾಲ್ಕು ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದುಕೊಂಡು ಸರಣಿ ವಶಪಡಿಸಿಕೊಂಡಿತ್ತು.