ಎರಡನೇ ಟೆಸ್ಟ್: ದ.ಆಫ್ರಿಕಾ 275 ರನ್ ಗಳಿಗೆ ಆಲೌಟ್

ಎರಡನೇ ಟೆಸ್ಟ್: ದ.ಆಫ್ರಿಕಾ 275 ರನ್ ಗಳಿಗೆ ಆಲೌಟ್

HSA   ¦    Oct 12, 2019 05:21:19 PM (IST)
ಎರಡನೇ ಟೆಸ್ಟ್: ದ.ಆಫ್ರಿಕಾ 275 ರನ್ ಗಳಿಗೆ ಆಲೌಟ್

ಪುಣೆ: ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟ್ ಮಾಡಿದೆ.

ನಿನ್ನೆ ಮೂರು ವಿಕೆಟ್ ಕಳಕೊಂಡು 36 ರನ್ ಮಾಡಿದ್ದ ದ.ಆಫ್ರಿಕಾ ಒಂದು ಹಂತದಲ್ಲಿ 162 ರನ್ ಗಳಿಗೆ ಎಂಟು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೇಶವ ಮಹಾರಾಜ್(72) ಮತ್ತು ವೆರ್ನೊನ್ ಫಿಲಂಡರ್(44) ಉತ್ತಮ ಜತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಸಾಗಿಸಿದರು.

ಅಶ್ವಿನ್ ಎರಡು ವಿಕೆಟ್ ಉರುಳಿಸಿ ದ. ಆಫ್ರಿಕಾದ ಇನ್ನಿಂಗ್ಸ್ ಕೊನೆಗೊಳಿಸಿದರು. ಅಶ್ವಿನ್ ಒಟ್ಟು ನಾಲ್ಕು ವಿಕೆಟ್ ಉರುಳಿಸಿದರು. ಉಮೇಶ್ ಯಾದವ್ ಮೂರು, ಮೊಹಮ್ಮದ್ ಶಮಿ ಮತ್ತು ಜಡೇಜಾ ತಲಾ ಎರಡು ವಿಕೆಟ್ ಉರುಳಿಸಿದ್ದಾರೆ.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 601 ರನ್ ಮಾಡಿ ಡಿಕ್ಲೇರ್ ಮಾಡಿತ್ತು.