ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಇಂದು ಚಾಲನೆ

ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಇಂದು ಚಾಲನೆ

YK   ¦    Sep 19, 2020 09:19:51 AM (IST)
ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಇಂದು ಚಾಲನೆ

ಅಬುದಾಬಿ: ಕ್ರಿಕೆಟ್ ರಸಿಕರ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಗೆ ಇಂದು ಚಾಲನೆ ದೊರೆಯಲಿದೆ.

ಹಾಲಿ ಚಾಮಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಸೆಣೆಸಾಡಲಿದೆ.

ಈ ಮೂಲಕ 53 ದಿನಗಳ ಕಾಲ ನಡೆಯುವ ಕ್ರಿಕೆಟ್ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕೋವಿಡ್ ಕಾರಣದಿಂದಾಗಿ ಈ ಬಾರಿ ಪ್ರೇಕ್ಷಕರಿಲ್ಲದೆ ಕ್ರಿಕೆಟ್ ನಡೆಯುತ್ತಿರುವುದು ವಿಶೇಷ. ಒಟ್ಟು ಪ್ರಶಸ್ತಿಗಾಗಿ 8 ತಂಡಗಳು ಸೆಣೆಸಾಡಲಿದೆ.