ವಿಶ್ವಕಪ್‌ನ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿಯ ಪದಕ

ವಿಶ್ವಕಪ್‌ನ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿಯ ಪದಕ

MS   ¦    Mar 28, 2021 11:56:53 AM (IST)
ವಿಶ್ವಕಪ್‌ನ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿಯ ಪದಕ

ನವದೆಹಲಿ: ನವದೆಹಲಿಯ “ಡಾ| ಕರ್ಣಿ ಸಿಂಗ್‌ ರೇಂಜ್‌’ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌ನ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಭಾರತೀಯ ಜೋಡಿಗೆ ಚಿನ್ನ ಮತ್ತು ಬೆಳ್ಳಿ ಪದಕ ಒಲಿದಿದೆ.

ಶನಿವಾರ ನಡೆದ ಚಿನ್ನದ ಪದಕ ಪಂದ್ಯದಲ್ಲಿ 18 ವರ್ಷದ ವಿಜಯವೀರ್ ಸಿಧು ಮತ್ತು 16 ವರ್ಷದ ತೇಜಸ್ವಿನಿ 9-1 ಅಂಕಗಳಿಂದ ಗುರ್‌ಪ್ರೀತ್ ಸಿಂಗ್ ಮತ್ತು ಅಬುದ್ನ್ಯಾ ಪಾಟೀಲ್ ಅವರನ್ನು ಸೋಲಿಸಿದರು.

ಶುಕ್ರವಾರ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಸಿಂಗಲ್ಸ್‌ ವಿಭಾಗದಲ್ಲಿ ವಿಜಯವೀರ್‌ ಬೆಳ್ಳಿ ಪದಕ ಗೆದ್ದಿದ್ದರು. ಇನ್ನೊಂದು ಕಡೆ ಟ್ರ್ಯಾಪ್‌ ಮಿಶ್ರ ವಿಭಾಗದಲ್ಲಿ ಭಾರತೀಯ ಜೋಡಿಯಾದ ಕೈನನ್‌ ಚೆನಾಯ್‌-ಶ್ರೇಯಸಿ ಸಿಂಗ್‌ ಅಂತಿಮ ಹಂತದಲ್ಲಿ ಸೋತು ನಾಲ್ಕನೇ ಸ್ಥಾನ ಪಡೆದು, ಕಂಚಿನ ಪದಕ ತಪ್ಪಿಸಿಕೊಂಡಿತು.