ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ: ವಿರಾಟ್ ಕೊಹ್ಲಿ

ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ: ವಿರಾಟ್ ಕೊಹ್ಲಿ

HSA   ¦    Feb 24, 2020 01:54:00 PM (IST)
ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ: ವಿರಾಟ್ ಕೊಹ್ಲಿ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾವು ಹೆಚ್ಚು ಸ್ಪರ್ಧಾತ್ಮಕವಾಗಿ ಆಡಲಿಲ್ಲ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟ್ಸ್ ಮೆನ್ ಗಳನ್ನು ಟೀಕಿಸಿದ್ದಾರೆ.

ನಾಲ್ಕನೇ ದಿನದಲ್ಲಿ ಟೀಂ ಇಂಡಿಯಾ ಕವೇಲ 47 ರನ್ ಗಳಿಗೆ ಆರು ವಿಕೆಟ್ ಕಳಕೊಂಡು 191 ರನ್ ಗಳಿಗೆ ಆಲೌಟ್ ಆಗಿತ್ತು. ಇದರಿಂದ ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ಕೇವಲ 9 ರನ್ ಗಳನ್ನು 1.4 ಓವರ್ ಗಳಲ್ಲಿ ಗುರಿಮುಟ್ಟಿತ್ತು.

ಮೊದಲ ಇನ್ನಿಂಗ್ಸ್ ನಲ್ಲಿ ಕೂಡ ಟೀಂ ಇಂಡಿಯಾ ಕೇವಲ 165 ರನ್ ಗಳಿಗೆ ಆಲೌಟ್ ಆಗಿತ್ತು. ಬ್ಯಾಟಿಂಗ್ ವೈಫಲ್ಯವೇ ಇದಕ್ಕೆ ಕಾರಣವೆಂದು ಕೊಹ್ಲಿ ಹೇಳಿರುವರು.