ಐಪಿಎಲ್ ಸೋಲು: ಧೋನಿ ಮಗಳಿಗೆ ರೇಪ್ ಬೆದರಿಕೆ

ಐಪಿಎಲ್ ಸೋಲು: ಧೋನಿ ಮಗಳಿಗೆ ರೇಪ್ ಬೆದರಿಕೆ

Megha R Sanadi   ¦    Oct 10, 2020 03:40:15 PM (IST)
ಐಪಿಎಲ್ ಸೋಲು: ಧೋನಿ ಮಗಳಿಗೆ ರೇಪ್ ಬೆದರಿಕೆ

ನವದೆಹಲಿ: ಈಗ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋತ ಕಾರಣದಿಂದ ಮಹೇಂದ್ರ ಸಿಂಗ್ ಧೋನಿ ಅವರ ಐದು ವರ್ಷದ ಮಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಬೆದರಿಕೆಗಳು ಬಂದಿವೆ.

ಈ ಮೊದಲು ಹಲವಾರು ಬಾರಿ ಆಟಗಾರರು ಪತ್ನಿಯರು ಅಥವಾ ಗೆಳತಿಯರಿಗೆ ಟ್ರೋಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುವುದು ಸಹಜವಾಗಿತ್ತು. ಆದರೆ , ಇದೇ ಮೊದಲ ಬಾರಿಗೆ ಚಿಕ್ಕ ಮಗು ಆಗಿರುವಂಹ ಧೋನಿಯವರ ಐದು ವರ್ಷದ ಮಗಳಿಗೆ ಬೆದರಿಕೆ ಹಾಕಿದ್ದು, ಸಮಾಜದಲ್ಲಿನ ಕ್ರೂರತೆಯ ರೂಪವನ್ನು ಹಾಗೂ ಕಾಮುಕರ ಕೆಟ್ಟ ಪ್ರವೃತ್ತಿಯನ್ನು ಬಯಲಿಗೆಳೆದಿದೆ.

ಈಗ ಬಂದಿರುವ ಐದು ವರ್ಷದ ಹುಡುಗಿಯ ಮೇಲಿನ ಬೆದರಿಕೆಗೆ ಎಲ್ಲೆಡೆ ತೀವ್ರವಾಗಿ ಆಕ್ರೋಶ ಹಾಗೂ ವಿರೋಧಗಳು ವ್ಯಕ್ತವಾಗುತ್ತಿತ್ತು, ಅದರಲ್ಲೂ ಹೆಚ್ಚಾಗಿ ಮಹಿಳೆಯರು ಇದಕ್ಕೆ ವಿರೋಧ ಭಾವವನ್ನು ವ್ಯಕ್ತಪಡಿಸಿದ್ದಾರೆ.