ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ: ಭಾರತ ಬೃಹತ್ ಮೊತ್ತದತ್ತ

ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ: ಭಾರತ ಬೃಹತ್ ಮೊತ್ತದತ್ತ

HSA   ¦    Oct 11, 2019 02:56:16 PM (IST)
ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ: ಭಾರತ ಬೃಹತ್ ಮೊತ್ತದತ್ತ

ಪುಣೆ: ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಬಾರಿಸಿ ತಂಡವು ದೊಡ್ಡ ಮೊತ್ತ ಪೇರಿಸಲು ನೆರವಾದರು.

ಏಳನೇ ದ್ವಿಶತಕ ಬಾರಿಸಿದ ಕೊಹ್ಲಿ 208 ರನ್ ಬಾರಿಸಿದರು. ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 495 ರನ್ ಮಾಡಿದೆ.

ಅಜಿಂಕ್ಯ ರಹಾನೆ 59 ರನ್ ಮಾಡಿ ವಿಕೆಟ್ ಕಳಕೊಂಡರು. ಇದರ ಬಳಿಕ 33 ರನ್ ಮಾಡಿರುವ ರವೀಂದ್ರ ಜಡೇಜಾ, ನಾಯಕನಿಗೆ ಜತೆ ನೀಡುತ್ತಿದ್ದಾರೆ.