ಹೃದಯದ ಶಸ್ತ್ರಚಿಕಿತ್ಸೆ ಬಳಿಕ ಕಪಿಲ್ ದೇವ್ ಆರೋಗ್ಯ ಸ್ಥಿರ

ಹೃದಯದ ಶಸ್ತ್ರಚಿಕಿತ್ಸೆ ಬಳಿಕ ಕಪಿಲ್ ದೇವ್ ಆರೋಗ್ಯ ಸ್ಥಿರ

HSA   ¦    Oct 23, 2020 03:49:55 PM (IST)
ಹೃದಯದ ಶಸ್ತ್ರಚಿಕಿತ್ಸೆ ಬಳಿಕ ಕಪಿಲ್ ದೇವ್ ಆರೋಗ್ಯ ಸ್ಥಿರ

ನವದೆಹಲಿ: ಹೃದಯಾಘಾತದಿಂದಾಗಿ ಗುರುವಾರ ತಡರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

62ರ ಹರೆಯದ ಕ್ರಿಕೆಟಿಗನಿಗೆ ಆಂಜಿಯೊಪ್ಲಾಸ್ಟಿ ಮಾಡಲಾಗಿದೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ದೆಹಲಿಯ ಫೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆ ಮೂಲಗಳು ತಿಳಿಸಿವೆ.

ಗುರುವಾರ ತಡರಾತ್ರಿ ಸುಮಾರು ಒಂದು ಗಂಟೆಗೆ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬಳಿಕ ಅವರಿಗೆ ತುರ್ತು ಆಂಜಿಯೊಪ್ಲಾಸ್ಟಿ ಶಸ್ತ್ರಚಿಕಿತ್ಸೆಯನ್ನು ಡಾ. ಅತುಲ್ ಮಥೂರ್ ಅವರು ಮಾಡಿರುವರು ಎಂದು ಪ್ರಕಟಣೆ ಮಾಹಿತಿ ನೀಡಿದೆ.