ಟೀಂ ಇಂಡಿಯಾ ಆಟಗಾರರ ಕೊರೋನಾ ಪರೀಕ್ಷೆ ನೆಗೆಟಿವ್

ಟೀಂ ಇಂಡಿಯಾ ಆಟಗಾರರ ಕೊರೋನಾ ಪರೀಕ್ಷೆ ನೆಗೆಟಿವ್

HSA   ¦    Jan 04, 2021 10:18:25 AM (IST)
ಟೀಂ ಇಂಡಿಯಾ ಆಟಗಾರರ ಕೊರೋನಾ ಪರೀಕ್ಷೆ ನೆಗೆಟಿವ್

ಸಿಡ್ನಿ: ಟೀಂ ಇಂಡಿಯಾದ ಆಟಗಾರರು ಹಾಗೂ ತರಬೇತಿ ಸಿಬ್ಬಂದಿಗಳ ಕೊರೋನಾ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಹೇಳಿದೆ.

ಮೆಲ್ಬರ್ನ್ ರೆಸ್ಟೋರೆಂಟ್ ನಲ್ಲಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ರಿಷಭ್ ಪಂತ್, ನವದೀಪ್ ಸೈನಿ ಮತ್ತು ಪೃಥ್ವಿ ಶಾ ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕ್ವಾರೆಂಟೈನ್ ನಲ್ಲಿ ಇರಲು ಸೂಚಿಸಲಾಗಿತ್ತು.

ಜ.3ರಂದು ಎಲ್ಲಾ ಆಟಗಾರರು ಮತ್ತು ತರಬೇತಿ ಸಿಬ್ಬಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈಗ ಎಲ್ಲರ ಪರೀಕ್ಷೆಯು ನೆಗೆಟಿವ್ ಬಂದಿದೆ.