47ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಹುಲ್ ದ್ರಾವಿಡ್

47ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಹುಲ್ ದ್ರಾವಿಡ್

YK   ¦    Jan 11, 2020 03:44:34 PM (IST)
47ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಹುಲ್ ದ್ರಾವಿಡ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಶನಿವಾರ 47ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಭಾರತದ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಗುರುತಿಸಿಕೊಂಡಿದ್ದ ದ್ರಾವಿಡ್ ಅವರು ಅತೀ ಹೆಚ್ಚು ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ದಾಳಿಯನ್ನು ಎದುರಿಸಿದ್ದರು.

ಕ್ರಿಕೆಟ್ ಜಗತ್ತಿನ ಗೋಡೆ ಎಂದೇ ಖ್ಯಾತರಾದ ರಾಹುಲ್ ದ್ರಾವಿಡ್ ಗೆ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ಕ್ರಿಕೆಟಿ ಬಳಗದವರು ಸೇರಿದಂತೆ ಅಭಿಮಾನಿಗಳು ರಾಹುಲ್ ಜತೆಗಿರುವ ಫೋಟೋವನ್ನು ಹಂಚಿಕೊಂಡು ಶುಭಾಶಯ ತಿಳಿಸುತ್ತಿದ್ದಾರೆ.