ಥರ್ಡ್ ಅಂಪೈರ್ ತಪ್ಪು ತೀರ್ಪಿಗೆ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ; ವಿಡಿಯೋ ವೈರಲ್

ಥರ್ಡ್ ಅಂಪೈರ್ ತಪ್ಪು ತೀರ್ಪಿಗೆ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ; ವಿಡಿಯೋ ವೈರಲ್

MS   ¦    Mar 27, 2021 07:22:41 PM (IST)
ಥರ್ಡ್ ಅಂಪೈರ್ ತಪ್ಪು ತೀರ್ಪಿಗೆ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ; ವಿಡಿಯೋ ವೈರಲ್

ಪುಣೆ: ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ನಾಟ್ ಔಟ್ ತೀರ್ಪು ನೀಡಿದ್ದ ಮೂರನೇ ಅಂಪೈರ್ ವಿರುದ್ಧದ ಆಕ್ರೋಶ ವ್ಯಕ್ತವಾಗಿದೆ.

ಬೆನ್ ಸ್ಟೋಕ್ಸ್ 31 ರನ್ ಗಳಿಸಿದ್ದಾಗ ಇನ್ನಿಂಗ್ಸ್ ನ 25.5ನೇ ಓವರನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಸ್ಟೋಕ್ಸ್ ಎರಡು ರನ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರ ಮನವಿ ಮೇರೆಗೆ ರನ್ ಔಟ್ ಪರಿಶೀಲಿಸಲು ಮೈದಾನದ ಅಂಪೈರ್ ಥರ್ಡ್ ಅಂಪೈರ್ ಗೆ ಮನವಿ ಮಾಡಿದರು. ಟಿವಿಯಲ್ಲಿ ರೀ-ಪ್ಲೇಗಳಲ್ಲಿ ಸ್ಟೋಕ್ಸ್ ಗೆರೆ ದಾಟದೇ ಇರುವುದು ಸ್ಪಷ್ಟವಾಗಿತ್ತು. ಆದರೆ ಮೂರನೇ ಅಂಪೈರ್ ನಾಟ್ ಔಟ್ ಎಂದು ಘೋಷಿಸಿದರು. ಈ ಬಗ್ಗೆ ಕೊಹ್ಲಿ ಮೈದಾನದಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟೇ ಅಲ್ಲದೆ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು ತಪ್ಪು ತೀರ್ಪು ನೀಡಿದ ಹಂಪರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರೊಂದಿಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಕೂಡ ಟ್ವೀಟ್ ಮಾಡಿ ತಮ್ಮ ವಿರುದ್ಧ ಭಾವವನ್ನು ವ್ಯಕ್ತಪಡಿಸಿದ್ದಾರೆ.