ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

HSA   ¦    Mar 24, 2020 07:30:46 PM (IST)
ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

ಟೋಕಿಯೋ: ಜಪಾನ್ ನಲ್ಲಿ ನಡೆಯಬೇಕಾಗಿದ್ದ 2020ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಒಂದು ವರ್ಷ ಕಾಲ ಮುಂದೂಡಲು ಜಪಾನ್ ಆಡಳಿತ ನಿರ್ಧರಿಸಿದೆ.

ಕೊರೋನಾ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸದಸ್ಯರು ಮತ್ತು ಜಪಾನ್ ಪ್ರಧಾನಿ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಕೊರೋನಾ ಭೀತಿಯಿಂದಾಗಿ ಈಗಾಗಲೇ ಹಲವಾರು ಕ್ರೀಡಾಕೂಟಗಳು ರದ್ದುಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ.