ಐಪಿಎಲ್ 2021 ಪಂದ್ಯಾವಳಿಗಳು ರದ್ದು: ಬಿಸಿಸಿಐ ಸ್ಪಷ್ಟನೆ

ಐಪಿಎಲ್ 2021 ಪಂದ್ಯಾವಳಿಗಳು ರದ್ದು: ಬಿಸಿಸಿಐ ಸ್ಪಷ್ಟನೆ

Ms   ¦    May 04, 2021 03:09:31 PM (IST)
ಐಪಿಎಲ್ 2021 ಪಂದ್ಯಾವಳಿಗಳು ರದ್ದು: ಬಿಸಿಸಿಐ ಸ್ಪಷ್ಟನೆ

ಮುಂಬೈ : ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಐಪಿಎಲ್ 2021 ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. 

 

ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಹಲವು ಆಟಗಾರರಲ್ಲಿ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಈ ತೀರ್ಮಾನ ಪ್ರಕಟಿಸಿದೆ . ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಲ್ಲಿ ಕೊರೋನಾ ಸೋಂಕು ಈಗಾಗಲೇ ದೃಢಪಟ್ಟಿದೆ . ಚೆನ್ನೈ ತಂಡದ ಬೌಲಿಂಗ್ ಕೋಚ್ ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ . 

 

ದೇಶದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವಾಗ ಐಪಿಎಲ್ ಪಂದ್ಯ ಆಯೋಜಿಸಿರುವುದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು . ಕೊರೋನಾ ಕಾರಣಕ್ಕಾಗಿ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶ ನಿರ್ಬಂಧಿಸಲಾಗಿತ್ತು . ಇದೀಗ ಆಟವನ್ನೇ ರದ್ದುಗೊಳಿಸುವ ತೀರ್ಮಾನವನ್ನು ಕೈಗೊಂಡಿದ್ದು ಇದರಿಂದಾಗಿ ಅನೇಕ ಐಪಿಎಲ್ ಪ್ರಿಯರಿಗೆ ನಿರಾಸೆಯಾಗಿದೆ.