ಅಫ್ರಿದಿಗೆ ತಿರುಗೇಟು ನೀಡಿದ ಸುರೇಶ್ ರೈನಾ

ಅಫ್ರಿದಿಗೆ ತಿರುಗೇಟು ನೀಡಿದ ಸುರೇಶ್ ರೈನಾ

HSA   ¦    May 18, 2020 04:15:14 PM (IST)
ಅಫ್ರಿದಿಗೆ ತಿರುಗೇಟು ನೀಡಿದ ಸುರೇಶ್ ರೈನಾ

ನವದೆಹಲಿ: ಕಾಶ್ಮೀರದ ಬಗ್ಗೆ ಮಾತನಾಡುವುದನ್ನು ಬಿಟ್ಟು, ನಿಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಗಮನಹರಿಸಿ ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಹೀದ್ ಅಫ್ರಿದಿಗೆ ಕಿವಿ ಮಾತು ಹೇಳಿದ್ದಾರೆ.

ಇತ್ತೀಚೆಗೆ ಅಫ್ರಿದಿ ವೀಡಿಯೋವೊಂದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ರೈನಾ, ನೀವು ಕಾಶ್ಮೀರವನ್ನು ಅದರಷ್ಟಕ್ಕೆ ಬಿಟ್ಟುಬಿಡಿ ಮತ್ತು ನಿಮ್ಮ ದೇಶದ ಬಗ್ಗೆ ಚಿಂತೆ ನಡೆಸಿ ಎಂದು ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.

ನನಗೆ ಕಾಶ್ಮೀರಿ ಎನ್ನುವ ಹೆಮ್ಮೆಯಿದೆ ಮತ್ತು ಇದು ಯಾವತ್ತಿಗೂ ಭಾರತದ ಒಂದು ಅಂಗವಾಗಿ ಇರುವುದು ಎಂದು ರೈನಾ ಟ್ವೀಟ್ ಮಾಡಿರುವರು.