ಪುರುಷರ ಕ್ರಿಕೆಟಿನಲ್ಲಿ ಇತಿಹಾಸ ಬರೆಯಲಿರುವ ಜಿಎಸ್ ಲಕ್ಷ್ಮೀ

ಪುರುಷರ ಕ್ರಿಕೆಟಿನಲ್ಲಿ ಇತಿಹಾಸ ಬರೆಯಲಿರುವ ಜಿಎಸ್ ಲಕ್ಷ್ಮೀ

HSA   ¦    Dec 05, 2019 08:31:45 PM (IST)
ಪುರುಷರ ಕ್ರಿಕೆಟಿನಲ್ಲಿ ಇತಿಹಾಸ ಬರೆಯಲಿರುವ ಜಿಎಸ್ ಲಕ್ಷ್ಮೀ

ನವದೆಹಲಿ: ಪುರುಷರ ಕ್ರೀಡೆ ಎಂದೇ ಪ್ರಸಿದ್ಧಿ ಪಡೆದಿದ್ದ ಕ್ರಿಕೆಟಿನಲ್ಲಿ ಮಹಿಳಾ ತಂಡಗಳು ಕೂಡ ಸೇರ್ಪಡೆಗೊಳ್ಳಲು ಆರಂಭವಾದವು. ಈಗ ಪುರುಷರ ಕ್ರಿಕೆಟ್ ಪಂದ್ಯವೊಂದಕ್ಕೆ ಮಹಿಳಾ ರೆಫ್ರಿಯೊಬ್ಬರು ಕಾರ್ಯನಿರ್ವಹಿಸಲಿದ್ದಾರೆ.

ಭಾರತದ ಜಿಎಸ್ ಲಕ್ಷ್ಮೀ ಅವರು ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನ ಲೀಗ್ 2ರಲ್ಲಿ ಅವರು ರೆಫ್ರಿಯಾಗಿರುವರು.

ಯುಎಇಯಲ್ಲಿ ನಡೆಯಲಿರುವ ಪಂದ್ಯದಲ್ಲಿ 51ರ ಹರೆಯದ ಲಕ್ಷ್ಮೀ ಅವರು ಡಿಸೆಂಬರ್ 8ರಂದು ಯುಎಇ ಮತ್ತು ಅಮೆರಿಕಾ ಮಧ್ಯೆ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಲಿರುವರು.

2019ರ ಮೇ 14ರಂದು ಲಕ್ಷ್ಮೀ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಯ ಮ್ಯಾಚ್ ರೆಫ್ರಿ ಪ್ಯಾನೆಲ್ ಗೆ ನೇಮಕ ಮಾಡಲಾಗಿತ್ತು.