ಮುಂದಿನ ಪಂದ್ಯದಲ್ಲಿ ಅಶ್ವಿನ್ ಆಡಲಿರುವರು: ಶ್ರೇಯಸ್ ಐಯ್ಯರ್

ಮುಂದಿನ ಪಂದ್ಯದಲ್ಲಿ ಅಶ್ವಿನ್ ಆಡಲಿರುವರು: ಶ್ರೇಯಸ್ ಐಯ್ಯರ್

HSA   ¦    Sep 21, 2020 04:28:12 PM (IST)
ಮುಂದಿನ ಪಂದ್ಯದಲ್ಲಿ ಅಶ್ವಿನ್ ಆಡಲಿರುವರು: ಶ್ರೇಯಸ್ ಐಯ್ಯರ್

ದುಬೈ: ಆರ್. ಅಶ್ವಿನ್ ಅವರು ಮುಂದಿನ ಐಪಿಎಲ್ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ತಿಳಿಸಿದರು.

ಭಾನುವಾರ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಪಂದ್ಯದ ವೇಳೆ ಅಶ್ವಿನ್ ಎಡದ ಭುಜಕ್ಕೆ ಗಾಯಮಾಡಿಕೊಂಡಿದ್ದರು.

ಅಶ್ವಿನ್ ಮುಂದಿನ ಪಂದ್ಯದಲ್ಲಿ ಆಡುವ ಬಗ್ಗೆ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವರು ಎಂದು ಐಯ್ಯರ್ ಹೇಳಿದರು.

ಅಶ್ವಿನ್ ಆಡುವ ಬಗ್ಗೆ ಫಿಸಿಯೋಗೆ ಮಾತ್ರ ತಿಳಿದಿದೆ. ಅಶ್ವಿನ್ ಮುಂದಿನ ಪಂದ್ಯದಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಆದರೆ ಕೊನೆಗೆ ಫಿಸಿಯೋ ಇದನ್ನು ನಿರ್ಧರಿಸಬೇಕಾಗಿದೆ ಎಂದರು.