ವಿ.ಟಿ.ಯು ಆಂತರ್ ವಲಯ ಖೋ ಖೋ: ಆಳ್ವಾಸ್ ಮಹಿಳಾ ತಂಡಕ್ಕೆ ಪ್ರಶಸ್ತಿ

ವಿ.ಟಿ.ಯು ಆಂತರ್ ವಲಯ ಖೋ ಖೋ: ಆಳ್ವಾಸ್ ಮಹಿಳಾ ತಂಡಕ್ಕೆ ಪ್ರಶಸ್ತಿ

DSK   ¦    May 24, 2019 06:34:37 PM (IST)
ವಿ.ಟಿ.ಯು ಆಂತರ್ ವಲಯ ಖೋ ಖೋ: ಆಳ್ವಾಸ್ ಮಹಿಳಾ ತಂಡಕ್ಕೆ ಪ್ರಶಸ್ತಿ

ಮೂಡುಬಿದಿರೆ: ವಿ.ಟಿ.ಯು ಅಂತರ್ ವಲಯದ ಖೋ-ಖೋ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ವಿಭಾಗ ಪ್ರಥಮ ಸ್ಥಾನ ಪಡೆಯಿತು.

ತುಮಕೂರು ಗುಬ್ಬಿಯ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಚಾಂಪಿಯನ್ ಶಿಪ್‍ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ತಂಡವು ಬಿ.ಎಮ್. ಸ್ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು ತಂಡವನ್ನು ಸೋಲಿಸುವುದರ ಮೂಲಕ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಪಡೆಯಿತು.

ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ. ಎಂ ಮೋಹನ ಆಳ್ವ, ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದರು.