ಭಾರತ-ನ್ಯೂಜಿಲೆಂಡ್ ಸೆಮಿಫೈನಲಿಗೆ ಮಳೆ ಅಡ್ಡಿ ಸಾಧ್ಯತೆ

ಭಾರತ-ನ್ಯೂಜಿಲೆಂಡ್ ಸೆಮಿಫೈನಲಿಗೆ ಮಳೆ ಅಡ್ಡಿ ಸಾಧ್ಯತೆ

HSA   ¦    Jul 08, 2019 05:18:19 PM (IST)
ಭಾರತ-ನ್ಯೂಜಿಲೆಂಡ್ ಸೆಮಿಫೈನಲಿಗೆ ಮಳೆ ಅಡ್ಡಿ ಸಾಧ್ಯತೆ

ನವದೆಹಲಿ: ನಾಳೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆಗಳಿವೆ.

ಪಂದ್ಯವು ಹೆಚ್ಚಿನ ಕುತೂಹಲ ಮೂಡಿಸಿದೆ. ಆದರೆ ಹವಾಮಾನ ಇಲಾಖೆಯ ಪ್ರಕಾರ ಮಳೆಯಿಂದ ಪಂದ್ಯ ವಿಳಂಬವಾಗಬಹುದು ಮತ್ತು ಪಂದ್ಯಕ್ಕೆ ಅಡ್ಡಿ ಉಂಟಾಗಬಹುದು ಎಂದು ಹೇಳಿದೆ.

ಭಾನುವಾರ ತುಂಬಾ ಒಣ ಮತ್ತು ಬಿಸಿಲಿನಿಂದ ಕೂಡಿತ್ತು. ಮೋಡಗಳು ಬೆಟ್ಟ ಪ್ರದೇಶದಲ್ಲಿ ಮಳೆ ಉಂಟು ಮಾಡುವ ಸಾಧ್ಯತೆಗಳು ಇವೆ ಎಂದು ಬ್ರಿಟನ್ ನ ಹವಾಮಾನ ಇಲಾಖೆಯು ಹೇಳಿದೆ.

ಲೀಗ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಪಂದ್ಯವು ವಿಳಂಬವಾಗಿ ಆರಂಭವಾಗಬಹುದು ಮತ್ತು ಪಂದ್ಯದ ವೇಳೆಯು ಅಡ್ಡಿಯುಂಟಾಗಬಹುದು. ಮಳೆ ಬರುವಂತಹ ಸಾಧ್ಯತೆಯು ಶೇ.50ರಷ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.