ಬಾಂಗ್ಲಾ ವಿರುದ್ಧ ಮೂರೇ ದಿನದಲ್ಲಿ ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ

ಬಾಂಗ್ಲಾ ವಿರುದ್ಧ ಮೂರೇ ದಿನದಲ್ಲಿ ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ

HSA   ¦    Nov 16, 2019 04:34:35 PM (IST)
ಬಾಂಗ್ಲಾ ವಿರುದ್ಧ ಮೂರೇ ದಿನದಲ್ಲಿ ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ

ಇಂಧೋರ್: ಆಲ್ ರೌಂಡ್ ಪ್ರದರ್ಶನ ನೀಡಿದ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನ್ನು ಮೂರೇ ದಿನದಲ್ಲಿ ಇನ್ನಿಂಗ್ಸ್ ಅಂತರದಿಂದ ಗೆದ್ದುಕೊಂಡಿದೆ.

ಬಾಂಗ್ಲಾದೇಶವನ್ನು 213 ರನ್ ಗಳಿಗೆ ಎರಡನೇ ಇನ್ನಿಂಗ್ಸ್ ನಲ್ಲಿ ಆಲೌಟ್ ಮಾಡಿದ ಭಾರತ ಟೆಸ್ಟ್ ನ್ನು ಇನ್ನಿಂಗ್ಸ್ ಮತ್ತು 130 ರನ್ ಗಳಿಂದ ಗೆದ್ದುಕೊಂಡಿದೆ.

ಎರಡನೇ ಇನ್ನಿಂಗ್ಸ್ ಮೊಹಮ್ಮದ್ ಶಮಿ ನಾಲ್ಕು ಮತ್ತು ರವಿಚಂದ್ರನ್ ಅಶ್ವಿನ್ ಅವರು 3 ವಿಕೆಟ್ ಉರುಳಿಸಿದರೆ, ಉಮೇಶ್ ಯಾದವ್ 2 ಮತ್ತು ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.

ಬಾಂಗ್ಲಾದ ಮೊದಲ ಇನ್ನಿಂಗ್ಸ್ ನ 150 ರನ್ ಗಳಿಗೆ ಉತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 493 ರನ್ ಮಾಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿದ್ದರು.