ಎರಡನೇ ಟೆಸ್ಟ್: ಮಯಾಂಕ್ ಅಗರ್ವಾಲ್ ಭರ್ಜರಿ ಶತಕ

ಎರಡನೇ ಟೆಸ್ಟ್: ಮಯಾಂಕ್ ಅಗರ್ವಾಲ್ ಭರ್ಜರಿ ಶತಕ

HSA   ¦    Nov 15, 2019 02:04:49 PM (IST)
ಎರಡನೇ ಟೆಸ್ಟ್: ಮಯಾಂಕ್ ಅಗರ್ವಾಲ್ ಭರ್ಜರಿ ಶತಕ

ಇಂದೋರ್: ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಭರ್ಜರಿ ಶತಕ(154) ನೆರವಿನಿಂದ ಭಾರತ ಎರಡನೇ ದಿನ ಮೊದಲ ಇನ್ನಿಂಗ್ಸ್ ಮೂರು ವಿಕೆಟ್ ನಷ್ಟಕ್ಕೆ 289 ರನ್ ಮಾಡಿದೆ.

ಎರಡನೇ ದಿನದ ಡ್ರಿಂಕ್ಸ್ ವಿರಾಮದ ಬಳಿಕ ಮಯಾಂಕ್ ಮತ್ತು ಅಜಿಂಕ್ಯ ರಹಾನೆ ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಇಂದು ಬೆಳಗ್ಗೆ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಪೂಜಾರ 54 ರನ್ ಮಾಡಿ ಅಬು ಜಾಯೆದ್ ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದರು.

ಆದರೆ ರಹಾನೆ ಮತ್ತು ಅಗರ್ವಾಲ್ ಉತ್ತಮ ಜತೆಯಾಟ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮಯಾಂಕ್ ಅಗರ್ವಾಲ್ ತನ್ನ ಮೂರನೇ ಟೆಸ್ಟ್ ಶತಕ ಪೂರೈಸಿದರು. ಇದೇ ವೇಳೆ ರಹಾನ್ ತನ್ನ ಅರ್ಧ ಶತಕ ಪೂರೈಸಿದ್ದು, 71 ರನ್ ಮಾಡಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.