ಕೊಲಂಬೊ: ಏಷ್ಯಾಕಪ್ 2023 ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇಂದು (ಸೆಪ್ಟೆಂಬರ್ 17) ಭಾರತ ಹಾಗೂ ಶ್ರೀಲಂಕಾ ನಡುನೆ ಏಷ್ಯಾಕಪ್ ಫೈನಲ್ ಪಂದ್ಯ ನಡೆಯಲಿದೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಮ್ಯಾಚ್ ಏರ್ಪಡಿಸಲಾಗಿದೆ.
ಎರಡು ಬಲಿಷ್ಠ ತಂಡದಗಳ ನಡುವಣ ಕಾದಾಟಕ್ಕೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ಟೀಮ್ ಇಂಡಿಯಾ ಎಂಟನೇ ಬಾರಿಗೆ ಏಷ್ಯಾಕಪ್ ಎತ್ತಿ ಹಿಡಿಯುವ ಪ್ಲಾನ್ನಲ್ಲಿದ್ದರೆ, ಇತ್ತ ಸಿಂಹಳೀಯರು ಆರನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಹವಾಮಾನ ಮುನ್ಸೂಚನೆಯ ಪ್ರಕಾರ ಇಂಡೋ-ಲಂಕಾ ಫೈನಲ್ ಪಂದ್ಯಕ್ಕೆ ಭಾನುವಾರವೂ ಮಳೆ ಅಡ್ಡಿ ಪಡಿಸುವ ನಿರೀಕ್ಷೆಯಿದೆ. ಪಂದ್ಯವು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಈ ಸಂದರ್ಭ ಮಳೆ ಬರುವ ಲಕ್ಷಣವಿಲ್ಲ. ಆದರೆ, ಸಂಜೆಯ ವೇಳೆಗೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ನ ಚಾನೆಲ್ನ ವಿವಿದ ಭಾಷೆಗಳಲ್ಲಿ ಮತ್ತು ಡಿಡಿ ಸ್ಪೋರ್ಟ್ಸ್‌ನಲ್ಲಿ ಟಿವಿಯಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮೊಬೈಲ್‌ನಲ್ಲಿ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಏಷ್ಯಾಕಪ್ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ , ಪ್ರಸಿದ್ಧ ಕೃಷ್ಣ, ತಿಲಕ್ ವರ್ಮ.
ಶ್ರೀಲಂಕಾ ಕ್ರಿಕೆಟ್ ತಂಡ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ಪಾತುಮ್ ನಿಸಂಕ, ದಿಮುತ್ ಕರುಣಾರತ್ನೆ, ಕುಸಲ್ ಜೆನಿತ್ ಪೆರೇರಾ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವ, ಮತಿಶ ಪತಿರಾನ, ಸದಿರ ಸಮರವಿಕ್ರಮ, ಮಹಿಷ್ ತೀಕ್ಷಣ, ದುನಿತ್ ವೆಲ್ಲೇಜ್, ಕಸುನ್ ರಜಿತ, ಫೆರ್ನಾಂಡೊ ಮತ್ತು ಪ್ರಮೋದ್ ಮಧುಶನ್.