ಭಾರತ ಶ್ರೀಲಂಕಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಮೊಹಮ್ಮದ್ ಸಿರಾಜ್ ಪಡೆದಿದ್ದಾರೆ. ಶ್ರೀಲಂಕಾದ ಪ್ರಮುಖ ವಿಕೆಟ್ ಗಳು ಪತನವಾಗಿದ್ದು 15 ಓವರ್ ನಲ್ಲಿ 10 ವಿಕೆಟ್ ಕಳೆದುಕೊಂಡಿದ್ದು, ಕೇವಲ 50 ರನ್ ಗಳಿಸಿದೆ. ಪಾಂಡ್ಯ 3 ವಿಕೆಟ್ ಪಡೆದರೆ, ಸಿರಾಜ್ 6 ವಿಕೆಟ್ ಕಬಳಿಸಿದ್ದಾರೆ. ಇನ್ನು ಬೂಮ್ರ 1 ವಿಕೆಟ್ ಕಬಳಿಸಿದ್ದಾರೆ.
4ನೇ ಓವರ್ನ ಮೊದಲ ಎಸೆತದಲ್ಲಿ ಪಾತುಮ್ ನಿಸ್ಸಂಕಾ (2) ವಿಕೆಟ್ ಪಡೆದ ಸಿರಾಜ್, 3ನೇ ಎಸೆತದಲ್ಲಿ ಸದೀರ ಸಮರವಿಕ್ರಮ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಇನ್ನು 4ನೇ ಎಸೆತದಲ್ಲಿ ಚರಿತ್ ಅಸಲಂಕಾ ಅವರನ್ನು ಔಟ್ ಮಾಡಿದರು. 6ನೇ ಎಸೆತದಲ್ಲಿ ಧನಜಂಯ ಡಿಸಿಲ್ವಾ ಕೀಪರ್ ಕ್ಯಾಚ್ ಔಟ್ ನೀಡಿ ನಿರ್ಗಮಿಸಿದರು.
ಈ ಮೂಲಕ ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿದ ಸಿರಾಜ್, 6ನೇ ಓವರ್ನ 4ನೇ ಎಸೆತದಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಕೇವಲ 4 ರನ್ ನೀಡಿ 5 ವಿಕೆಟ್ ಕಬಳಿಸಿದ ವಿಶೇಷ ಸಾಧನೆ ಮಾಡಿದರು.
ಅಷ್ಟೇ ಅಲ್ಲದೆ ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ ವಿಶ್ವದ 2ನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಚಾಮಿಂಡ ವಾಸ್ ಈ ಸಾಧನೆ ಮಾಡಿದ್ದರು.
ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಪಂದ್ಯವನ್ನು ಮಳೆಯು ವಿಳಂಬಗೊಳಿಸಿದೆ. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ವಿರುದ್ಧ ಎಸ್‌ಎಲ್‌ನಲ್ಲಿ ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ.