News Kannada
Saturday, February 24 2024
ಕ್ರೀಡೆ

ಏಷ್ಯಾಕಪ್‌: ಟಾಸ್‌ ಗೆದ್ದ ಭಾರತದಿಂದ ಬ್ಯಾಟಿಂಗ್‌ ಆಯ್ಕೆ

Photo Credit : News Kannada

ಬದ್ಧವೈರಿ ರಾಷ್ಟ್ರಗಳಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಏಕದಿನ ಹೈವೋಲ್ಟೆಜ್ ಪಂದ್ಯಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಇಂದು (ಶನಿವಾರ, ಸೆ.2) ಮಧ್ಯಾಹ್ನ 3 ಗಂಟೆಗೆ ರೋಚಕ ಫೈಟ್ ನಡೆಯಲಿದೆ. ಇದೀಗ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಹಬ್ಬವೋ ಹಬ್ಬ. ಅಕ್ಟೋಬರ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪೂರ್ವಾಭ್ಯಾಸದ ವೇದಿಕೆಯಾಗಿರುವ ಏಷ್ಯಾ ಕಪ್ ಟೂರ್ನಿ ಉಭಯ ತಂಡಗಳಿಗೆ ದೊಡ್ಡ ಅವಕಾಶವನ್ನು ತೆರೆದಿಟ್ಟಿದೆ. ಎ ಗುಂಪಿನಲ್ಲಿರುವ ಈ ತಂಡಗಳು ಇದೇ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಭಾರತ ಇಂದು ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದರೆ ಪಾಕಿಸ್ತಾನ ಈಗಾಗಲೇ ನೇಪಾಳ ವಿರುದ್ಧ ಗೆದ್ದು ಗೆಲುವಿನ ಖಾತೆ ತೆರೆದುಕೊಂಡಿದೆ.

ಕಿಂಗ್ ಕೊಹ್ಲಿ ಅಪ್ರತಿಮ ಆಟಗಾರ, ಎಗ್ರೆಸ್ಸಿವ್ ಸ್ವಭಾವದ ಕೊಹ್ಲಿ ಕ್ರೀಸ್ ಗೆ ಅಂಟಿ ನಿಂತು ಕೊಂಡರೆಂದರೆ ಎದುರಾಳಿಗಳೆಲ್ಲ ಉಡೀಸ್, ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಷ್ಟೊಂದು ಪವರ್ ಇದೆ. ಈ ಈ ಹಿಂದಿನ ಹಲವು ಪಂದ್ಯಗಳು ಅದಕ್ಕೆ ಸಾಕ್ಷಿಯಾಗಿದೆ. ಕಳೆದ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ನಡೆದಾಗ ಪಾಕ್ ತಂಡಕ್ಕೆ ಭಾರತವು ಸೋಲಿನ ಕಹಿಯುಣಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಅಬ್ಬರಕ್ಕೆ ಪಾಕ್‌ ತಂಡದ ಘಟಾನುಘಟಿ ಬೌಲರ್‌ಗಳು ಸುಸ್ತಾಗಿ ಹೋಗಿದ್ದರು. ಉತ್ತಮ ಲಯದಲ್ಲಿರುವ ವಿರಾಟ್ ಅವರನ್ನು ಕಟ್ಟಿಹಾಕುವುದೇ ಈಗಲೂ ಆ ಬೌಲರ್‌ಗಳಿಗೆ ಸವಾಲಾಗಲಿದೆ.

ಶಾಹೀನ್ ಆಫ್ರಿದಿ, ನಸೀಂ ಶಹಾ ಮತ್ತು ಹ್ಯಾರಿಸ್ ರವೂಫ್ ಅವರು ತಮ್ಮ ಬೌಲಿಂಗ್‌ನಲ್ಲಿ ಹೊಸ ತಂತ್ರಗಾರಿಕೆ ಅನುಸರಿಸುವುದು ಅನಿವಾರ್ಯವಾಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಇದು ಪ್ರತಿಷ್ಠೆಯ ಟೂರ್ನಿ ಆಗಿದೆ. ಏಷ್ಯಾ ಕಪ್ ಗೆದ್ದರೆ ಅವರ ಮತ್ತು ತಂಡದ ಆತ್ಮವಿಶ್ವಾಸವು ಹೆಚ್ಚಲಿದೆ. ಅದರಿಂದ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಸಾಮರ್ಥ್ಯ ಹೆಚ್ಚಬಹುದು. ಸುಮಾರು ಒಂದು ದಶಕದಿಂದ ಭಾರತ ತಂಡವು ಐಸಿಸಿ ಟ್ರೋಫಿ ಗೆಲುವಿನ ಬರ ಅನುಭವಿಸುತ್ತಿದೆ. ಅದನ್ನು ನೀಗಿಸಲು ಈಗ ಗೆಲುವೊಂದೇ ದಾರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು