News Kannada
Saturday, February 24 2024
ಬೆಂಗಳೂರು ನಗರ

ಬೆಂಗಳೂರು: ಫುಟ್‌ಬಾಲ್‌ ಟ್ರಯಲ್ಸ್ ನಡೆಸಲು ಎಂಜೊಗೊ ಸಜ್ಜು

Enjogo set to organize football trials in Bengaluru
Photo Credit : Freepik

ಬೆಂಗಳೂರು: ಎಂಜೊಗೊ ತನ್ನ ರೆಸಿಡೆನ್ಷಿಯಲ್ ಅಕಾಡೆಮಿಗಳಿಗೆ (ಫುಟ್‌ಬಾಲ್‌ ತರಬೇತಿಯೊಂದಿಗೆ ಬೋರ್ಡಿಂಗ್ ಸ್ಕೂಲ್) ಅಕ್ಟೋಬರ್ 1, 2022ರಂದು ಶನಿವಾರ ಬೆಂಗಳೂರಿನ ಎಚ್‌ಎಎಲ್‌ನ ಬಿಬಿಎಫ್‌ಎಸ್‌ ಅರೇನಾದಲ್ಲಿ ಟ್ರಯಲ್ಸ್ ಆಯೋಜಿಸಿದೆ.
ಎಂಜೊಗೊ ದೇಶಾದ್ಯಂತ ತನ್ನ ಹೊಚ್ಚ ಹೊಸ ಉಪಕ್ರಮ- 100 ಟ್ರಯಲ್ಸ್, 100 ನಗರಗಳು. ಅನಿಯಮಿತ ಕನಸುಗಳು. ಮೂಲಕ ದೇಶಾದ್ಯಂತ ಫುಟ್‌ಬಾಲ್ ಆಕಾಂಕ್ಷಿಗಳನ್ನು ತಲುಪುವಗುರಿ ಹೊಂದಿದೆ.

ಎಂಜೊಗೊ ಟೆಕ್ನಿಕಲ್‌ ತಂಡವು ಫುಟ್‌ಬಾಲ್‌ ಜನಪ್ರಿಯತೆ ಆಧರಿಸಿ 100+ ಭಾರತೀಯ ನಗರಗಳನ್ನು ಟ್ರಯಲ್ಸ್ ನಡೆಸಲು ಆಯ್ಕೆ ಮಾಡಿದೆ ಮತ್ತು ಬಿಬಿಎಫ್‌ಎಸ್ ರೆಸಿಡೆನ್ಷಿಯಲ್ ಅಕಾಡೆಮಿಯ ಅತ್ಯುತ್ತಮ ಯುವ ಆಟಗಾರರನ್ನುಆಯ್ಕೆ ಮಾಡುತ್ತದೆ.
ಬಿಬಿಎಫ್‌ಎಸ್‌ ಅಥವಾ ಭೈಚುಂಗ್ ಭುಟಿಯಾ ಫುಟ್‌ಬಾಲ್ ಸ್ಕೂಲ್ಸ್ ಭಾರತದ ಅತ್ಯಂತ ದೊಡ್ಡ ಫುಟ್‌ಬಾಲ್‌ ಅಕಾಡೆಮಿಯಾಗಿವೆ ಮತ್ತು ಈಗಾಗಲೇ ತನ್ನ ರೆಸಿಡೆನ್ಷಿಯಲ್ ಪ್ರೋಗ್ರಾಮ್‌ ಅಡಿಯಲ್ಲಿ ಪ್ರತಿಭಾವಂತ ಫುಟ್‌ಬಾಲರ್‌ಗಳಿಗೆ 2 ಕೋಟಿ ರೂ.ಗಳನ್ನು ಮೀರಿ ಶಿಷ್ಯವೇತನಗಳನ್ನು ನೀಡಿದೆ. ಶೈಕ್ಷಣಿಕ, ತರಬೇತಿ, ಆಹಾರ, ವಸತಿ ಮತ್ತು ಸ್ಪರ್ಧಾತ್ಮಕ ಮಾಹಿತಿಗೆ ಶೇ.100ರಷ್ಟು ಶಿಷ್ಯವೇತನಗಳನ್ನು ಪಡೆಯುವ ಅವಕಾಶಗಳಿವೆ.

“ಇದು ಕೇವಲ ಪ್ರಾರಂಭವಷ್ಟೇ. ನಮ್ಮ ಕಾರ್ಯಾಚರಣೆಗಳು ವೃದ್ಧಿಸಿದಂತೆ ನಾವು ಪಟ್ಟಿಗೆ ಹೆಚ್ಚು ಸ್ಥಳಗಳನ್ನು ಸೇರ್ಪಡೆ ಮಾಡುತ್ತೇವೆ. ಅಂತಿಮವಾಗಿ, ಈ ಯೋಜನೆಯುಭಾರತದಲ್ಲಿ ಪ್ರತಿಜಿಲ್ಲೆಯನ್ನೂತಲುಪುವಯೋಜನೆ ಹೊಂದಿದೆ” ಎಂದು ಎಂಜೊಗೊ  ಹಾಗೂ ಬೈಚುಂಗ್ ಭುಟಿಯಾ ಫುಟ್‌ಬಾಲ್ ಸ್ಕೂಲ್ಸ್ ಸಹ-ಸಂಸ್ಥಾಪಕ ಮತ್ತು ಸಿಇಒ ಕಿಶೋರ್‌ತೈದ್ ಹೇಳಿದರು.

ಬಿಬಿಎಫ್‌ಎಸ್ ರೆಸಿಡೆನ್ಷಿಯಲ್ ಅಕಾಡೆಮಿಗಳು ದೆಹಲಿ, ಮಹಾರಾಷ್ಟ್ರ, ಮೇಘಾಲಯ, ಕರ್ನಾಟಕ ಮತು ಕೇರಳ ಒಳಗೊಂಡು ಐದು ನಗರಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಈ ಟ್ರಯಲ್‌ಗಳು ಪ್ರಾದೇಶಿಕ ಮತ್ತುರಾಷ್ಟ್ರೀಯಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿಆಯ್ಕೆಯಾದ ನಂತರ ಆಯ್ಕೆಯಾದ ಫುಟ್‌ಬಾಲ್ ಪಟುಗಳು ಅಂತಿಮ ಸುತ್ತಿಗೆ ಬಿಬಿಎಫ್‌ಎಸ್ ರೆಸಿಡೆನ್ಷಿಯಲ್ ಅಕಾಡೆಮಿಗಳಲ್ಲಿ ಒಂದಕ್ಕೆ ಸಂಚರಿಸಲಿದ್ದಾರೆ.

“ನಾವು ಪ್ರತಿಯೊಬ್ಬ ಯುವ ಜನರಿಗೂ ತಲುಪುವ ಅವರಿಗೆ ನಮ್ಮನ್ನು ಪ್ರತಿನಿಧಿಸಲು ಅವಕಾಶ ನೀಡಲು ಬಯಸಿದ್ದೇವೆ. ಈ ಟ್ರಯಲ್‌ಗಳ ಮೂಲಕ ನಾವು ಅತ್ಯುತ್ತಮ ಪ್ರತಿಭೆಯನ್ನು ಕಂಡುಕೊಳ್ಳುವ ಮತ್ತುಅವರಿಗೆ ಶಿಖರಕ್ಕೇರಲು ಸೂಕ್ತವಾದ ದಾರಿಯನ್ನು ಪೂರೈಸುವ ಗುರಿ ಹೊಂದಿದ್ದೇವೆ” ಎಂದು ಭಾರತದ ಅತ್ಯಂತ ದೀರ್ಘಕಾಲ ಫುಟ್‌ಬಾಲ್‌ ತಂಡದ ನಾಯಕರಾಗಿದ್ದ ಮತ್ತು ಬಿಬಿಎಫ್‌ಎಸ್ ಸಹ-ಸಂಸ್ಥಾಪಕ ಬೈಚುಂಗ್ ಭುಟಿಯಾ ಹೇಳಿದರು.

ಬಿಬಿಎಫ್‌ಎಸ್‌ ಸದೃಢವಾದ ಭಾಗವಹಿಸುವವರ ಜಾಲ ಅಭಿವೃದ್ಧಿ ಪಡಿಸಿದ್ದು ಅದರಲ್ಲಿ ಹಲವಾರುಅಕಾಡೆಮಿ ಆಟಗಾರರು ಭಾರತಕ್ಕೆ ವಯೋಮಾನದ ಗುಂಪಿನ ತಂಡಗಳು, ಇಂಡಿಯನ್ ಸೂಪರ್ ಲೀಗ್, ಐ-ಲೀಗ್ ಮತ್ತು ಸಂತೋಷ್‌ಟ್ರೋಫಿ ತಂಡಗಳಲ್ಲಿ ಆಡಿದ್ದಾರೆ. ಗೌರವ್ ಬೊರಾ(ನಾರ್ಥ್ಈಸ್ಟ್ಯುನೈಟೆಡ್), ರೋಹಿತ್‌ಕುಮಾರ್(ಬೆಂಗಳೂರು ಎಫ್‌ಸಿ), ಆಶಿಕಿ ಕುರುನಿಯನ್(ಭಾರತದರಾಷ್ಟ್ರೀಯತಂಡ) ಮತ್ತಿತರಅಂತಾರಾಷ್ಟ್ರೀಯ ತಾರೆಯರು ಬಿಬಿಎಫ್‌ಎಸ್‌ನಲ್ಲಿ ಪ್ರಾರಂಭಿಸಿದರು ಮತ್ತುತಮ್ಮ ಸ್ಥಾನವನ್ನು ಎತ್ತರಿಸಿಕೊಂಡರು.

ಜನವರಿ 1, 2006ರಿಂದ ಡಿಸೆಂಬರ್ 31, 2013ರ ನಡುವೆ ಜನಿಸಿದವರು ಈ ಟ್ರಯಲ್‌ಗಳಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ವರದಿ ಮಾಡಿಕೊಳ್ಳುವ ಸಮಯ 8.30ಐಎಸ್‌ಟಿ. ಫುಟ್‌ಬಾಲ್ ಕ್ರೀಡಾಳುಗಳು ಅವರ ಕಿಟ್‌ಗಳು ಮತ್ತು ಸರ್ಕಾರದಿಂದ ಪಡೆದ ಗುರುತಿನ ಚೀಟಿ ಹೊಂದಿರಬೇಕು. ನೋಂದಣಿ ಶುಲ್ಕ ರೂ.100 ಭಾಗವಹಿಸುವ ಎಲ್ಲರಿಗೂ ಅನ್ವಯಿಸುತ್ತದೆ.

ಎಂಜೊಗೊ ಆ್ಯಪ್‌ಅನ್ನು ನಿಮ್ಮ ಫೋನ್‌ನಲ್ಲಿಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಬೆಂಗಳೂರು ಟ್ರಯಲ್ಸ್ಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಿ. ಆಕಾಂಕ್ಷಿಗಳು ಯಾವುದೇ ವಿಚಾರಣೆಗಳಿಗೆ ರಾಕೇಶ್‌ರಾಧಾಕೃಷ್ಣನ್(+91 9620744677)ಅವರನ್ನು ಸಂಪರ್ಕಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು