ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿನಿ ರಾಮನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇಬ್ಬರೂ ತಮ್ಮ ಮಗನೊಂದಿಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿನಿ ರಾಮನ್ ತಮ್ಮ ಮಗನ ಹೆಸರನ್ನು ಕೂಡ ಹಂಚಿಕೊಂಡಿದ್ದು, ಈ ದಂಪತಿಗಳು ತಮ್ಮ ಮಗನಿಗೆ ʼಲೋಗನ್ ಮೇವರಿಕ್ ಮ್ಯಾಕ್ಸ್‌ವೆಲ್ʼ ಎಂದು ಹೆಸರಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಭಾರತೀಯ ಮೂಲದವರಾಗಿದ್ದಾರೆ. ಸೆಪ್ಟೆಂಬರ್ 11 ರಂದು ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಿಹಿ ಸುದ್ದಿಯ ನಂತರ, ವಿನಿ ಮತ್ತು ಮ್ಯಾಕ್ಸ್‌ವೆಲ್ ದಂಪತಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂನೆ ಮಹಾಪೂರವೇ ಹರಿದುಬರುತ್ತಿದೆ.